ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟ ಕಾಡು ಹಂದಿಯ ಮಾಂಸ ಸುಡುತ್ತಿದ್ದ ಇಬ್ಬರ ಬಂಧನ
ಚಾಮರಾಜನಗರ: ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟ ಕಾಡು ಹಂದಿಯ ಮಾಂಸ ಸುಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಯೋಜನೆ ಗುಂಡ್ಲುಪೇಟೆ ಉಪ ವಿಭಾಗದ ಮದ್ದೂರು ವಲಯ ಚೆನ್ನಮ್ಮಲ್ಲಿಪುರ ಗ್ರಾಮದ ಜಾಕೋಬ್ ಫಾರ್ಮಲ್ಲಿ ನಡೆದಿದೆ.
ಕೇರಳ ಮೂಲದ ಎಂ.ವಿ.ಥಾಮಸ್ ಹಾಗೂ ಶಿಜು ಜಾಕೋಬ್ ಬಂದಿದ್ದರು, ಈ ಇಬ್ಬರು ಚೆನ್ನಮಲ್ಲಿಪುರ ಗ್ರಾಮದ ಜಾಕೋಬ್ ಅವರ ಜಮೀನಿನಲ್ಲಿ ಕಾಡು ಹಂದಿಯ ಮಾಂಸ ಸುಡುತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಹಂದಿ ಮಾಂಸದ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆ ವೇಳೆ ಚೆನ್ನಮಲ್ಲಿಪುರ ಗ್ರಾಮದ ಬಸಪ್ಪ/ ದೊಡ್ಡಬಸಪ್ಪ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಕಲ್ಪಿಸಿದ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದ್ದ ಕಾಡು ಹಂದಿಯನ್ನ ಜಮೀನಿನ ಮಾಲಿಕರು ಮಾಂಸಕ್ಕಾಗಿ ನಮಗೆ ನೀಡಿದ್ದು ನಾವು ಗುತ್ತಿಗೆ ಮಾಡುತ್ತಿದ್ದು ಜಮೀನಿನಲ್ಲಿ ಕಾಡು ಹಂದಿ ಮಾಂಸ ಸುಡುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 9,39,58 ಆರ್ / ಡಬ್ಲ್ಯೂ 2/16 ಸಿ,2/36,51,55 ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಮೀನು ಮಾಲಕ ಬಸಪ್ಪ / ದೊಡ್ಡ ಬಸಪ್ಪ ತಲೆಮರೆಸಿಕೊಂಡಿದ್ದು ಅವನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ. ದಾಳಿಯಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಜಿ ರವೀಂದ್ರ, ಮದ್ದೂರು ವಲಯದ ವಲಯ ಅರಣ್ಯ ಅಧಿಕಾರಿ ಮಲ್ಲೇಶ್, ಪ್ರವೀಣ್ ಹಂಚಿನಾಳ್, ಹಾಗೂ ಉಪವಲಯ ಅರಣ್ಯ ಅಧಿಕಾರಿ, ಗಸ್ತು ವನಪಾಲಕರಾದ ದೇವಿಂದ್ರ ಯರಗಲ್ಲ, ನವೀನ್ ಹಾಗೂ ಇಲಾಖ ಸಿಬ್ಬಂದಿಗಳು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























