11:35 AM Tuesday 28 - October 2025

ಚುನಾವಣೆ ಹಿನ್ನೆಲೆ: ಬ್ರಿಟನ್ ಸಂಸತ್ತು ವಿಸರ್ಜನೆ

30/05/2024

ಬ್ರಿಟನ್ ಸಂಸತ್ತಿಗೆ ಜುಲೈ 4ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ಬ್ರಿಟನ್ ಸಂಸತ್ತನ್ನು ವಿಸರ್ಜಿಸಲಾಗಿದೆ. ಭಾರೀ ಮಳೆಯ ನಡುವೆ ಪ್ರಧಾನಿ ರಿಷಿ ಸುನಾಕ್ ಚುನಾವಣಾ ಘೋಷಣೆ ಮಾಡಿರುವುದನ್ನು ಹಲವರು ಪ್ರಚಾರ ಕಾರ್ಯದ ನಡುಕ ಎಂದು ವಿಶ್ಲೇಷಿಸಿದ್ದು, ಮತ್ತೆ ಕೆಲವರು ಮಳೆಯನ್ನು ದುರಾದೃಷ್ಟದ ಸಂಕೇತ ಎಂದೂ ಪರಿಗಣಿಸಿದ್ದಾರೆ.

14 ವರ್ಷಗಳ ಕನ್ಸರ್ವೇಟಿವ್ ಆಡಳಿತದ ಬಳಿಕ ಲೇಬರ್ ಪಕ್ಷವನ್ನು ಈ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸೂಚನೆಗಳು ಕಾಣುತ್ತಿವೆ. ಗುರುವಾರ ಮಧ್ಯರಾತ್ರಿ 12 ಗಂಟೆ ಕಳೆದು ಒಂದು ನಿಮಿಷವಾಗುತ್ತಿದ್ದಂತೆ ಸಂಸತ್ತಿನ ಎಲ್ಲ 650 ಸ್ಥಾನಗಳು ತೆರವಾಗಿವೆ. ಈ ಮೂಲಕ ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

ನಿರೀಕ್ಷೆಗಿಂತ ಮೊದಲೇ ಅಂದರೆ ಜುಲೈ 4ರಂದೇ ಚುನಾವಣೆ ನಡೆಸುವ ಸುನಾಕ್ ನಿರ್ಧಾರಕ್ಕೆ, ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅವರ ಪಕ್ಷದ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದು ಕಂಡುಬಂದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮಾನವ ಹಕ್ಕುಗಳ ಮಾಜಿ ವಕೀಲ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ, ಈ ಅವಕಾಶವನ್ನು ಬಳಸಿಕೊಂಡು 14 ವರ್ಷಗಳ ಬಳಿಕ ಅಧಿಕಾರದ ಕನಸು ಕಾಣುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version