ಊಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: 6 ಕಾರ್ಮಿಕರ ದಾರುಣ ಸಾವು

07/02/2024
ಊಟಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಪರಿಣಾಮ 6 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡು, ಇನ್ನಿಬ್ಬರು ಅವಶೇಷಗಳಡಿಯಲ್ಲಿ ನಾಪತ್ತೆಯಾಗಿರುವ ಘಟನೆ ತಮಿಳುನಾಡಿನ ಊಟಿಯ ಲವ್ ಡೇಲ್ ಬಳಿ ನಡೆದಿದೆ.
ಸಕಿಲಾ (30), ಸಂಗೀತಾ (35), ಭಾಗ್ಯ (36), ಉಮಾ (35), ಮುತ್ತುಲಕ್ಷ್ಮಿ (36), ಮತ್ತು ರಾಧಾ (38) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದ ಒಂದು ಭಾಗವು ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಊಟಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಟ್ಟಡ ಕುಸಿತದಲ್ಲಿ 6 ಜನರು ಮೃತಪಟ್ಟಿರುವುದನ್ನು ಊಟಿ ಜನರಲ್ ಆಸ್ಪತ್ರೆಯ ಡೀನ್ ಪದ್ಮಿನಿ ಖಚಿತಪಡಿಸಿದ್ದಾರೆ. ಘಟನೆಯ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.