5:30 AM Wednesday 20 - August 2025

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಈತ ಮಾಡಿದ್ದೇನು?

12/02/2021

ನವದೆಹಲಿ:  ಇಂತಹ ಘಟನೆ ಉತ್ತರಪ್ರದೇಶದಲ್ಲಿ ಈಗ ಸರ್ವೇ ಸಾಮಾನ್ಯ. ಆದರೂ ಕರ್ನಾಟಕದ ಮಟ್ಟಿಗೆ ಇದೊಂದು ಅಮಾನವೀಯ ಮತ್ತು ಮಾನವ ಜಗತ್ತು ತಲೆತಗ್ಗಿಸುವ ಘಟನೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಮಹಿಳೆಯೊಬ್ಬರ ದೇಹ ಸುಟ್ಟು ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉನ್ನಾವೋದ ನಾತುಕೇಡ  ಅಖಿಲೇಶ್ ನಿಷಾದ್ ಬಂಧಿತ ಆರೋಪಿಯಾಗಿದ್ದಾನೆ. ಈತ 12 ವರ್ಷಗಳ ಹಿಂದೆ ಕಾನ್ಪುರದ ನವಾಬ್ ಗಂಜ್ ನಿವಾಸಿ ಅಂಜಲಿ ಎಂಬ 24 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಅಂಜಲಿ ಪ್ರಸ್ತುತ 9 ತಿಂಗಳ ಗರ್ಭಿಣಿಯಾಗಿದ್ದಳು. ಇದೇ ಸಂದರ್ಭದಲ್ಲಿ ಆರೋಪಿ ಅಖಿಲೇಶ್ ಗೆ ಅಕ್ರಮ ಸಂಬಂಧಗಳು ಆರಂಭವಾಗಿದ್ದವು. ಇದು ಆತನ ಪತ್ನಿಗೂ ತಿಳಿಯಿತು. ಪದೇ ಪದೇ ತನ್ನಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗುತ್ತಿರುವುದು ಅಖಿಲೇಶ್ ನನ್ನು ಕೆರಳಿಸಿತ್ತು.

ಬುಧವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಅಖಿಲೇಶ್, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು  ಹೋಗಿ ಪ್ಲೇಮೇಬಲ್ ಲಿಕ್ವಿಡ್ ಬಳಸಿ ಗರ್ಭಿಣಿಗೆ ಬೆಂಕಿ ಹಚ್ಚಿದ್ದಾನೆ.  ಪತಿಯ ದುಷ್ಕೃತ್ಯಕ್ಕೆ ಸುಟ್ಟು ಕರಕಲಾದ ಅಂಜಲಿ ಈ ಲೋಕದ ಅನ್ಯಾಯ ಸಹಿಸಲಾರದೇ ಪ್ರಾಣ ಬಿಟ್ಟಿದ್ದಾಳೆ.

ಗುರುವಾರ ಬೆಳಗ್ಗೆ ಸಾರ್ವಜನಿಕರಿಗೆ ಸುಟ್ಟು ಕರಲಾಗಿದ್ದಅಂಜಲಿಯ ಮೃತದೇಹ ಕಂಡು ಬಂದಿದೆ. ಮೃತದೇಹದ ಪಕ್ಕ ಬೀದಿ ನಾಯಿಗಳು  ಸುತ್ತಾಡುತ್ತಿತ್ತು.  ತಕ್ಷಣವೇ ಅವರು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು,  ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version