11:22 PM Thursday 21 - August 2025

ರೈಲು ಹೋಗುತ್ತಿದ್ದ ವೇಳೆ ದಿಢೀರನೆ ಕುಸಿದ ಸೇತುವೆ: ಮತ್ತೇನಾಯ್ತು ಗೊತ್ತಾ..?

25/06/2023

ಅಮೆರಿಕದ ರಾಜ್ಯ ಮೊಂಟಾನಾದಲ್ಲಿ ಯೆಲ್ಲೋಸ್ಟೋನ್ ನದಿಯನ್ನು ದಾಟುವ ಸೇತುವೆ ಕುಸಿದಿದೆ. ಇದೇ ವೇಳೆ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿದ್ದ ಸರಕು ರೈಲು ಹರಿಯುವ ನೀರಿನಲ್ಲಿ ಮುಳುಗಿದೆ.

ಘಟನೆಯಲ್ಲಿ ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯ ಆಗಿರುವ ಬಗ್ಗೆ ವರದಿಯಾಗಿಲ್ಲ. ರೈಲು ಬಂಡಿಗಳು ಬಿಸಿ ಡಾಂಬರು ಮತ್ತು ಕರಗಿದ ಗಂಧಕವನ್ನು ಸಾಗಿಸುತ್ತಿದ್ದವು. ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯಾಡಳಿತ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿದರು.

ಅಸೋಸಿಯೇಟೆಡ್ ಪ್ರೆಸ್ ವರದಿಗಾರರೊಬ್ಬರು ಕೆಲವು ಟ್ಯಾಂಕ್ ಗಳಿಂದ ಹಳದಿ ವಸ್ತು ಹೊರಬರುವುದನ್ನು ನೋಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಇದೇ ವೇಳೆ ಕೌಂಟಿಯ ತುರ್ತು ಸೇವೆಗಳ ಮುಖ್ಯಸ್ಥ ಡೇವಿಡ್ ಮಾತನಾಡುತ್ತಾ, ಸದ್ಯ ಸ್ಥಳದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಪಾಯವಿಲ್ಲ.

ಅಪಾಯಕಾರಿ ವಸ್ತುಗಳನ್ನು ನದಿಯಿಂದ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ನದಿಯಲ್ಲಿ ಮೂರು ಡಾಂಬರು ಬಂಡಿಗಳು ಮತ್ತು ನಾಲ್ಕು ಸಲ್ಫರ್ ಬಂಡಿಗಳು ಇದ್ದವು. ತಂಪಾದ ತಾಪಮಾನಕ್ಕೆ ಒಡ್ಡಿಕೊಂಡಾಗ ಡಾಂಬರು ಮತ್ತು ಸಲ್ಫರ್ ಎರಡೂ ಬೇಗನೆ ಘನಗೊಳ್ಳುತ್ತವೆ.

ಸೇತುವೆ ಕುಸಿತದಿಂದ ರಾಜ್ಯದ ಅನೇಕ ಗ್ರಾಹಕರಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸುವ ಫೈಬರ್-ಆಪ್ಟಿಕ್ ಕೇಬಲ್ ಸಹ ಮುರಿದು ಹೋಗಿದೆ ಎಂದು ಹೈಸ್ಪೀಡ್ ಪೂರೈಕೆದಾರ ಗ್ಲೋಬಲ್ ನೆಟ್ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version