1:52 PM Thursday 16 - October 2025

ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿನಲ್ಲಿ ಕಟ್ಟಿಹಾಕಿದ ಪ್ರಕರಣದ ಸತ್ಯಾಂಶ ಬಯಲು!

26/02/2021

ಯಲ್ಲಾಪುರ: 10ನೇ ತರಗತಿ ವಿದ್ಯಾರ್ಥಿಯನಿಯನ್ನು ಬೈಕ್ ನಲ್ಲಿ ಮೂವರು ಯುವಕರು ಕಿಡ್ನಾಪ್ ಮಾಡಿ  ಕಾಡಿನಲ್ಲಿ ಕಟ್ಟಿ ಹಾಕಿರುವ ಪ್ರಕರಣ ಇದೀಗ ಬಯಲಾಗಿದ್ದು,  ವಿದ್ಯಾರ್ಥಿನಿ ಹೊಡೆದಿರುವುದು ಠುಸ್ ಪಟಾಕಿ ಎನ್ನುವುದು ಇದೀಗ ತಿಳಿದು ಬಂದಿದೆ.

ಶಾಲೆಯಲ್ಲಿ ಹೋಮ್ ವರ್ಕ್ ಸರಿಯಾಗಿ ಮಾಡಿದ್ದಾಳಾ ಎಂಬ ಬಗ್ಗೆ ವಿದ್ಯಾರ್ಥಿನಿಯ ತಾಯಿ ಆಗಾಗ ಶಾಲೆಯಲ್ಲಿ ವಿಚಾರಿಸುತ್ತಿದ್ದರು. ಬುಧವಾರ ಕೂಡ ಶಾಲೆಯ ಶಿಕ್ಷಕರಿಗೆ ಕರೆ ಮಾಡಿ ಮಗಳೂ ಹೋಮ್ ವರ್ಕ್ ಮಾಡಿದ್ದಾಳಾ ಎಂದು ಕೇಳಿದ್ದಾರೆ. ಆದರೆ ಶಿಕ್ಷಕರು ಇಲ್ಲ ಎಂದು ಆ ಕಡೆಯಿಂದ ಉತ್ತರಿಸಿದ್ದಾರೆ.

ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಮನೆಯಲ್ಲಿ ಬೈಯ್ಯಬಹುದು ಎಂದು ಹೆದರಿದ  ವಿದ್ಯಾರ್ಥಿನಿ ಬಸ್ ನಿಂದ ಇಳಿದು ತನ್ನ ಮನೆಯ ಸಮೀಪದ ಕಾಡಿಗೆ ಹೋಗಿ ಕುಳಿತು ಕೊಂಡಿದ್ದಾಳೆ.

ರಾತ್ರಿ 1ರ ವೇಳೆಗೆ ಯಾರದ್ದಾದರೂ ನೆರವು ಬೇಕು ಎಂದು ಅಂದುಕೊಂಡು ಕಾಡಿನಲ್ಲಿ ಬೈಕ್ ವೊಂದು ಹೋಗುತ್ತಿರುವಾಗ ಜೋರಾಗಿ ಬೊಬ್ಬೆ ಹೊಡೆದಿದ್ದು, ತನ್ನ ಕೈಕಾಲುಗಳನ್ನು ತಾನೇ ಕಟ್ಟಿಕೊಂಡು, ವೇಲ್ ನಿಂದ ಬಾಯಿಯನ್ನು ಕಟ್ಟಿಕೊಂಡಿದ್ದಾಳೆ.

ಬೈಕ್ ಸವಾರರು ಎಲ್ಲರಿಗೂ ವಿಚಾರ ಮುಟ್ಟಿಸಿದ್ದಾರೆ. ಮನೆಗೆ ಬಂದು ತಾಯಿಯಲ್ಲಿ ಯಾರೋ ಎರಡು ಬೈಕ್ ಮೇಲೆ ನನ್ನನ್ನು ಅಪಹರಿಸಿ, ರಾತ್ರಿ ವೇಳೆ ತಂದು ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ವಿಷಯ ಯಾರಲ್ಲಾದರೂ ತಿಳಿಸಿದರೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ ಎಂದು ಹೇಳಿ ತಾಯಿಯ ಬೈಗಳಿನಿಂದ ಪರಾಗಲು ನೋಡಿದ್ದು, ಇಡೀ ಊರನ್ನೇ ಭೀತಿಗೊಳಿಸಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version