1:29 AM Thursday 29 - January 2026

‘ವಿಕ್ರಾಂತ್ ರೋಣ’ ಚಿತ್ರ ಬಿಡುಗಡೆ ವೇಳೆ ಸಿನಿಮಾ ಮಂದಿರಗಳಿಗೆ ಬರಲಿದ್ದಾರೆ ಅಪ್ಪು!

vikranth rona
22/07/2022

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಚಿತ್ರ ತೆರೆಗೆ ಅಪ್ಪಲಿಸಲು ಕೆಲವೇ ದಿನಗಳಿದ್ದು, ಕೆಜಿಎಫ್ ಚಿತ್ರದ ಬಳಿಕ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ಡ ದಾಖಲೆ ಬರೆಯಲಿದೆ ಎನ್ನುವ ನಿರೀಕ್ಷೆಗಳು ವ್ಯಕ್ತವಾಗಿವೆ. ಈ ನಡುವೆ ಕಿಚ್ಚ ಸುದೀಪ್ ಅವರ ಈ ಚಿತ್ರಕ್ಕೆ ಪುನೀತ್ ಅಭಿಮಾನಿಗಳು ಕೂಡ ಬೆಂಬಲಿಸಿದ್ದು, ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಸ್ನೇಹ ಬಂಧದ ಫೋಟೋಗಳ ಕಟೌಟ್ ಕೂಡ ವಿಕ್ರಾಂತ್ ರೋಣ ಚಿತ್ರದ ಸಂದರ್ಭದಲ್ಲಿ ರಾಜ್ಯಾದ್ಯಂತ ರಾರಾಜಿಸಲಿದೆ.

ಕಿಚ್ಚ ಸುದೀಪ್​ ಮತ್ತು ಪುನೀತ್​ ರಾಜ್​ಕುಮಾರ್ ಅವರದ್ದು ಹಲವು ವರ್ಷಗಳ ಸ್ನೇಹ. ಬಾಲ್ಯದಿಂದಲೂ ಅವರು ಪರಿಚಿತರು. ವೇದಿಕೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಜೊತೆಯಾಗಿ ಪೋಸ್​ ನೀಡಿದ ಈ ಫೋಟೋ ಇಂದು ಬೆಲೆಕಟ್ಟಲು ಸಾಧ್ಯವಾಗದ ಫೋಟೋವಾಗಿದೆ. ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಈ ಫೋಟೋದ ಮೂಲಕ ಅಭಿಮಾನಿಗಳು ವಿಶೇಷವಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಲಿದ್ದಾರೆ.

ಇನ್ನೂ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನೋಡಬೇಕಾದರೆ, ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ‘ರಂಗಿತರಂಗ’ ಎಂಬ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿರುವ ಅನೂಪ್ ಭಂಡಾರಿ, ವಿಕ್ರಾಂತ್ ರೋಣ ಚಿತ್ರದಲ್ಲೂ ರಂಗಿತರಂಗಕ್ಕಿಂತಲೂ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ. ಜೊತೆಗೆ ರಂಗಿತರಂಗದ ನಾಯಕ ನಟ ನಿರೂಪ್ ಭಂಡಾರಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಜಾಕ್​ ಮಂಜು ಅವರು ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರ ಟ್ರೈಲರ್,  ಹಾಡುಗಳಿಂದ ಸಿನಿಪ್ರಿಯರ ಹೃದಯ ಗೆದ್ದಿದೆ.

ಈ ಚಿತ್ರದ ಇನ್ನೊಂದು ಆಕರ್ಷಣೆ ಏನಂದ್ರೆ,  ಈ ಚಿತ್ರ 3ಡಿಯಲ್ಲಿ ಬಿಡುಗಡೆಯಾಗಲಿದೆ.  ಹೀಗಾಗಿ ಭರ್ಜರಿ ಓಪನಿಂಗ್ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಖುದ್ದಾಗಿ ವಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮೊದಲಾದ ವೇದಿಕೆಗಳಲ್ಲಿ ಚಿತ್ರದ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಸಿನಿಮಾ ಪ್ರಿಯರು ಕೂಡ ಕಾತರದಿಂದ ಚಿತ್ರ ವೀಕ್ಷಿಸಲು ಕಾಯುತ್ತಿದ್ದಾರೆ. ಏನೇ ಆಗಲಿ ಕನ್ನಡ ಮತ್ತೊಂದು ಚಿತ್ರ ಅದ್ದೂರಿಯಾಗಿ ಗೆಲ್ಲಲಿ ಎಂಬ ಹಾರೈಕೆ ಎಲ್ಲೆಡೆಗಳಿಂದಲೂ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version