ಪಾದಯಾತ್ರಿಗಳ ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದ ವಿನಯ್ ಗುರೂಜಿ: ಶಾಸಕಿ ನಯನಾ ಮೋಟಮ್ಮ ಭಾಗಿ

vinay guruji
05/03/2024

ಚಿಕ್ಕಮಗಳೂರು: ವಿನಯ್ ಗುರೂಜಿ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ಪಾದಯಾತ್ರಿಗಳ ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಕಾಲು ತೊಳೆದು ಪುಷ್ಪಗಳನ್ನ ಹಾಕಿದರು.

ಶಿವರಾತ್ರಿಯಂದು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮಾಡಲು  ಪಾದಯಾತ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೇ ವೇಳೆ  ಪಾದಯಾತ್ರಿಗಳ ಕಾಲು ತೊಳೆದ ವಿನಯ್ ಗುರೂಜಿ  ಯಾತ್ರಿಗಳ ತಲೆಗೆ ಪುಷ್ಪಗಳನ್ನ ಹಾಕಿದರು. ಇದೇ ವೇಳೆ ವಿನಯ್  ಗುರೂಜಿಗೆ  ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು.

ಮೂಡಿಗೆರೆ ತಾಲೂಕಿನ ಸಾಮಾಜಿಕ ಸೇವಾ ಸಮಿತಿಯಿಂದ  ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಹಾಗೂ ನಯನಾ ಮೋಟಮ್ಮ ಭಾಗಿಯಾಗಿದ್ದರು.

ಸಾಮಾಜಿಕ ಸೇವಾ ಸಮಿತಿ ಧರ್ಮಸ್ಥಳ ಪಾದಯಾತ್ರಿಗಳಿಗೆ ನಿತ್ಯ ಊಟ–ವಸತಿಗೆ ಸೌಲಭ್ಯ  ಕಲ್ಪಿಸಿಕೊಡುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version