ವಿರಾಟ್ ಕೊಹ್ಲಿಯ ಪಾದ ಮುಟ್ಟಿ, ಅಪ್ಪಿಕೊಂಡ ಅಭಿಮಾನಿಗೆ ಭದ್ರತಾ ಸಿಬ್ಬಂದಿಯಿಂದ ಹಿಗ್ಗಾಮುಗ್ಗಾ ಹಲ್ಲೆ: ವಿಡಿಯೋ ವೈರಲ್

fans claim
27/03/2024

ಪಂದ್ಯದ ಮಧ್ಯೆ ಕ್ರಿಕೆಟ್ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅವರನ್ನು  ಅಪ್ಪಿಕೊಂಡು, ಪಾದಮುಟ್ಟಿ ನಮಸ್ಕರಿಸಿದ್ದ ಯುವಕನೋರ್ವನನ್ನು ಮೈದಾನದಿಂದ ಹೊರಗೆ ಕರೆದೊಯ್ದ ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(IPL) 2024ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಪಂಜಾಬ್ ಜೊತೆಗೆ ಸೆಣಸಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿದ್ದ.

ವಿರಾಟ್ ಕೊಹ್ಲಿ ಅವರ ಪಾದ ಮುಟ್ಟಿ, ಅಪ್ಪಿಕೊಂಡಿದ್ದ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದು ಸ್ಟೇಡಿಯಂನಲ್ಲಿ ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಮೈದಾನಕ್ಕೆ ನುಗ್ಗಿ ಆಟಗಾರರನ್ನು ತಬ್ಬಿಕೊಳ್ಳುವುದು ಅಭಿಮಾನಿಗಳಿಗೆ ಸಂತಸವಾದರೆ, ಭದ್ರತಾ ಸಿಬ್ಬಂದಿಗೆ ತಲೆ ನೋವಾಗಿರುತ್ತದೆ.  ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ತಾಳ್ಮೆ ಕಳೆದುಕೊಂಡು ಅಭಿಮಾನಿಗೆ ಸರಿಯಾಗಿ ಝಾಡಿಸಿದ್ದಾರೆನ್ನಲಾಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version