‘ಭಾರತ್’ ವಿವಾದ: ಟೀಂ ಇಂಡಿಯಾ ಬದಲು ‘ಟೀಂ ಭಾರತ್’ ಎಂದು ಹೆಸರು ಬದಲಾಯಿಸಲು ಸೆಹ್ವಾಗ್ ಮನವಿ

05/09/2023

ಕೇಂದ್ರ ಸರ್ಕಾರವು ದೇಶದ ಹೆಸರನ್ನು ‘ಭಾರತ್‌’ ಎಂದು ಅಧಿಕೃತವಾಗಿ ಬದಲಾಯಿಸಲು ಮುಂದಾಗಿರುವ ಬೆನ್ನಲ್ಲೇ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಬಿಸಿಸಿಐಗೆ ಟೀಮ್‌ ಇಂಡಿಯಾ ಎಂದು ಹೆಸರು ಬದಲಿಸುವಂತೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 18 ರಿಂದ 21ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡುವ ಸಾಧ್ಯತೆ ಇದೆ. ರಿಪಬ್ಲಿಕ್‌ ಆಫ್‌ ಇಂಡಿಯಾ ಬದಲಿಗೆ ರಿಪಬ್ಲಿಕ್‌ ಆಫ್‌ ಭಾರತ ಎನ್ನುವ ಹೆಸರನ್ನು ಸರ್ಕಾರ ನೀಡಲಿದೆ. ಈ ಕುರಿತಾಗಿ ಈಗಾಗಲೇ ಚರ್ಚೆಯಾಗುತ್ತಿದ್ದಂತೆ ಬಿಸಿಸಿಐಗೆ ಸೆಹ್ವಾಗ್‌ ಈ ರೀತಿ ಟ್ವೀಟ್ ಮಾಡಿದ್ದಾರೆ.

‘ಹೆಸರು ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವಂತಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರನ್ನು ‘ಭಾರತ್’ ಅನ್ನು ಅಧಿಕೃತವಾಗಿ ಮರಳಿ ಪಡೆಯಲು ಈಗಾಗಲೇ ಬಹಳ ತಡವಾಗಿದೆ. ಈ ವಿಶ್ವಕಪ್ ವೇಳೆ ನಮ್ಮ ಆಟಗಾರರು ನಮ್ಮ ಎದೆಯ ಮೇಲೆ ಇಂಡಿಯಾ ಎನ್ನುವ ಬದಲು ಭಾರತ ಎಂದು ಬದಲಾಯಿಸಿ” ಎಂದು ಬಿಸಿಸಿಐ ಮತ್ತು ಜಯ್ ಶಾ (ಬಿಸಿಸಿಐ ಕಾರ್ಯದರ್ಶಿ) ಅವರ ಹೆಸರನ್ನು​​ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version