ರಾಹುಲ್ ಗಾಂಧಿಯನ್ನು ಭೇಟಿ ಮಾಡೋಕೇ‌ ನನಗೆ 10 ಕೆಜಿ ತೂಕ ಇಳಿಸಿಕೊಳ್ಳುವಂತೆ ಹೇಳಲಾಗಿತ್ತು: ಶಾಸಕ ಬಾಬಾ ಸಿದ್ದಿಕಿ ಪುತ್ರ ಜೀಶಾನ್ ಆರೋಪ

22/02/2024

ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡ ಒಂದು ದಿನದ ನಂತರ ಕಾಂಗ್ರೆಸ್ ಶಾಸಕ ಮತ್ತು ಬಾಬಾ ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿ ಗುರುವಾರ ಪಕ್ಷದೊಳಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ರಾಹುಲ್ ಗಾಂಧಿ ತಂಡದ ವ್ಯಕ್ತಿಯೊಬ್ಬರು ವಯನಾಡ್ ಸಂಸದರನ್ನು ಭೇಟಿಯಾಗಲು ಬಯಸಿದರೆ ತೂಕ ಇಳಿಸಿಕೊಳ್ಳಬೇಕು ಎಂದು ಹೇಳಿದ್ದರು ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಉತ್ತಮ ನಾಯಕ. ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ನನಗೆ ತಂದೆಯಂತಿದ್ದಾರೆ. ಆದರೆ ಕೆಲವೊಮ್ಮೆ, ಅವರ ಹಿರಿತನದ ಹೊರತಾಗಿಯೂ, ಖರ್ಗೆ ಜಿ ಅವರ ಕೈಗಳನ್ನು ಸಹ ಕಟ್ಟಿಹಾಕಲಾಗುತ್ತದೆ. ರಾಹುಲ್ ಗಾಂಧಿಯನ್ನು ಸುತ್ತುವರೆದಿರುವ ತಂಡವು ಪಕ್ಷವನ್ನು ನಾಶಪಡಿಸುತ್ತಿದೆ.

ಕಾಂಗ್ರೆಸ್ ಅನ್ನು ಮುಗಿಸಲು ಅವರು ಮತ್ತೊಂದು ಪಕ್ಷದಿಂದ ಸುಫಾರಿ ತೆಗೆದುಕೊಂಡಿದ್ದಾರೆ ಎಂದು ತೋರುತ್ತದೆ” ಎಂದು ಜೀಶಾನ್ ಸಿದ್ದಿಕಿ ಆರೋಪಿಸಿದ್ದಾರೆ.

“ನಾನು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದಾಗ, ರಾಹುಲ್ ಗಾಂಧಿಗೆ ಹತ್ತಿರವಿರುವ ವ್ಯಕ್ತಿಯೊಬ್ಬರು ‘ಮೊದಲು 10 ಕೆಜಿ ತೂಕ ಇಳಿಸಿಕೊಳ್ಳಿ ಮತ್ತು ನಂತರ ನೀವು ರಾಹುಲ್ ಗಾಂಧಿಯನ್ನು ಭೇಟಿಯಾಗಬಹುದು’ ಎಂದು ಹೇಳಿದ್ದರು. ನಾನು ಶಾಸಕ. ಅಲ್ಲದೇ ಮುಂಬೈ ಯುವ ಕಾಂಗ್ರೆಸ್ ಮುಖ್ಯಸ್ಥ. ನೀವು ಯಾರನ್ನಾದರೂ ಬಾಡಿ ಶೇಮಿಂಗ್ ಮಾಡುತ್ತಿದ್ದೀರಾ?” ಎಂದು ಅವರು ಪ್ರಶ್ನಿಸಿದರು.

“ರಾಹುಲ್ ಗಾಂಧಿ ಅವರ ತಂಡವು ತುಂಬಾ ಭ್ರಷ್ಟವಾಗಿದೆ” ಎಂದು ಸಿದ್ದೀಕ್ ಆರೋಪಿಸಿದರು. “ರಾಹುಲ್ ಗಾಂಧಿ ಸ್ವತಃ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ತಂಡವು ತುಂಬಾ ಒರಟಾಗಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version