ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ: ವಿಪಕ್ಷಗಳು ರಾಜಕೀಯ ಮಾಡುತ್ತಿವೆ: ಸಿಎಂ ಸಿದ್ದರಾಮಯ್ಯ

27/09/2023
ಚಾಮರಾಜನಗರ: ತಮಿಳುನಾಡಿಗೆ 18 ದಿನಗಳ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾದಪ್ಪನ ಸನ್ನಿಧಾನದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರದ ಕುರಿತು ಚ್ಯಾಲೆಂಜ್ ಮಾಡ್ತೇವೆ. ಸದ್ಯ ನಮ್ಮ ಬಳಿ ನೀರು ಇಲ್ಲ ಈಗಾಗ್ಲೆ ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿವೆ. ವಿಪಕ್ಷಗಳು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಲೇ ಇರುತ್ತೆ ಎಂದು ಅವರು ಟೀಕಿಸಿದರು.
ಮಳೆಗಾಗಿ ಮಾದಪ್ಪನ ಮೊರೆ ಹೋದ ಸಿಎಂ:
ತೀವ್ರ ಬರಗಾಲದ ಹಿನ್ನೆಲೆ ಮಳೆಗಾಗಿ ಮೊರೆ ಹೋಗಿರುವೆ, ಮಾದಪ್ಪನ ಬಳಿ ದೇವರಲ್ಲಿ ಪ್ರಾರ್ಥಿಸಿರುವೆ, ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿರುವೆ, ಮಾದಪ್ಪನ ಮೇಲೆ ನನಗೆ ನಂಬಿಕೆ ಇದೆ. ಉತ್ತಮ ಮಳೆ ಬೀಳುವ ನೀರೀಕ್ಷೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.