ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ: ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನ ಮಾಡುತ್ತೇವೆ: ಎಡಿಜಿಪಿ ಹಿತೇಂದ್ರ ಪ್ರತಿಕ್ರಿಯೆ

22/08/2023
ಚಾಮರಾಜನಗರ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬಂದಿರುವ ಎರಡು ಪ್ರಕರಣ ಬಂದಿವೆ, ಹಲವಾರು ಪ್ರಕರಣ ತನಿಖೆಯಲ್ಲಿವೆ, ಇದು ಸೂಕ್ಷ್ಮ ಪ್ರಕರಣ ಆಗಿರೋದ್ರಿಂದ ಹೆಚ್ಚಿನ ಮಾಹಿತಿ ನೀಡೋಕೆ ಆಗಲ್ಲ, ಬೆದರಿಕೆ ಪತ್ರ ಬರ್ತಾ ಇರೋದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನ ಮಾಡುತ್ತೇವೆ ಎಂದು ಚಾಮರಾಜನಗರದಲ್ಲಿ ಲಾ ಅಂಡ್ ಆರ್ಡರ್ ಎಡಿಜಿಪಿ ಹಿತೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
20 ವರ್ಷದಿಂದ ಚಾಮರಾಜನಗರ ಡಿಆರ್ ಪೊಲೀಸರಿಗೆ ಪ್ರಮೋಷನ್ ದೊರೆಯದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಲ್ಲಿನ 24 ಜನರಿಗೆ ಸಮಸ್ಯೆ ಆಗ್ತಿದೆ, ಎಸ್ ಟಿಎಫ್ ಇದ್ದಾಗಿಂದ ಅದನ್ನ ಚಾಮರಾಜನಗರಕ್ಕೆ ಅಲಾರ್ಟ್ ಮಾಡಿದ್ರು, ವಯೋಮಿತಿ 45 ವರ್ಷ ಮುಗಿದಿರೋದ್ರಿಂದ ಪ್ರಮೋಷನ್ ಗೆ ಪರಿಗಣಿಸಲು ಸಾಧ್ಯವಾಗ್ತಿಲ್ಲ , ಪೊಲೀಸ್ ಪ್ರಧಾನ ಕಾರ್ಯದರ್ಶಿ ಜೊತೆ ಮಾತಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.