ಪಶ್ಚಿಮ ಬಂಗಾಳದಲ್ಲಿ ಮತದಾನದ ಮಧ್ಯೆ ಹಿಂಸಾಚಾರ: ಮೃತಪಟ್ಟವರ ಸಂಖ್ಯೆ 14 ಕ್ಕೇರಿಕೆ

08/07/2023

ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಾರಂಭವಾದ ಗಲಭೆಯಿಂದಾಗಿ 14 ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆರು ಮಂದಿ ತೃಣಮೂಲ ಕಾಂಗ್ರೆಸ್ ಸದಸ್ಯರು, ಬಿಜೆಪಿ, ಕಾಂಗ್ರೆಸ್, ಮತ್ತು ಐಎಸ್ಎಫ್ ಪಕ್ಷದ ತಲಾ ಓರ್ವರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ.

ಹಲವೆಡೆ ಮತಪೆಟ್ಟಿಗೆಗಳನ್ನೂ ಸಹ ನಾಶಪಡಿಸಲಾಗಿದ್ದು, ಗಲಭೆಯ ತೀವ್ರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಹಿಂಸಾಚಾರ ಪ್ರಾರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಿಂದ ಪರಸ್ಪರ ಆರೋಪ ಪ್ರತ್ಯಾರೋಪ ಪ್ರಾರಂಭಗೊಂಡಿದೆ. ಇದು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಎಂದು ಸಿಎಂ ಮಮತಾ ಬ್ಯಾನಾರ್ಜಿ ಆರೋಪಿಸಿದ್ದರೆ, ಟಿಎಂಸಿ ನಾಯಕರ ಗೂಂಡಾಗಿರಿಯಿಂದಾಗಿ ಗಲಭೆ ಸಂಭವಿಸಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ದೂರಿದ್ದಾರೆ.

ಬರೋಬ್ಬರಿ 78,887 ಸ್ಥಾನಗಳಿಗೆ ಇಂದು ಚುನಾವಣೆ ಆಯೋಜಿಸಲಾಗಿದ್ದು, ಸುಮಾರು 5.67 ಕೋಟಿ ಮಂದಿ ಮತ ಚಲಾಯಿಸಲಿದ್ದಾರೆ. 2.06 ಲಕ್ಷಕ್ಕೂ ಹೆಚ್ಚು ಮಂದಿ ಕಣದಲ್ಲಿದ್ದು 22 ಜಿಲ್ಲಾ ಪಂಚಾಯಿತಿ, 9,730 ಪಂಚಾಯಿತಿ ಸಮಿತಿ, 63,229 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version