ಕೋಳಿ ಮೊದಲೋ ಮೊಟ್ಟೆ ಮೊದಲೋ?: ಕೊನೆಗೂ ಸಿಕ್ಕಿತು ಉತ್ತರ!

egg or hen
08/10/2024

ಸಾಕಷ್ಟು ಜನರು, ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ ಅಂತ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದರು. ಆದ್ರೆ ಇನ್ನು ಆ ರೀತಿ ಪ್ರಶ್ನೆಗಳನ್ನು ಯಾರೂ ಕೇಳುವಂತಿಲ್ಲ. ಯಾಕಂದ್ರೆ, ಇದೀಗ ಈ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಕಂಡು ಹಿಡಿದಿದ್ದಾರೆ.

ಹೌದು..! ಶೆಫೀಲ್ಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ವಾರ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮಾಡಿದ ಅಧ್ಯಯನದಲ್ಲಿ ಕೋಳಿ ಮೊದಲೋ, ಮೊಟ್ಟೆ ಮೊದಲೋ ಅನ್ನುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲಾಗಿದೆ.

eeg

ವಿಜ್ಞಾನಿಗಳ ಅಧ್ಯಯನದಲ್ಲಿ ಕೋಳಿ ಮೊದಲು ಎನ್ನುವ ಉತ್ತರ ಸಿಕ್ಕಿದೆ.  ಯಾಕೆಂದ್ರೆ ಕೋಳಿ ಇಲ್ಲದೆ ಮೊಟ್ಟೆ ಬರಲು ಸಾಧ್ಯವಿಲ್ಲ. ಮೊಟ್ಟೆಯ ಚಿಪ್ಪಿನಲ್ಲಿ ಓವೊಕ್ಲಾಡಿನ್ ಎಂಬ ಪ್ರೊಟೀನ್ ಇದ್ದು, ಇದು ಇಲ್ಲದೆ ಮೊಟ್ಟೆಯ ಚಿಪ್ಪು ರೂಪುಗೊಳ್ಳುವುದಿಲ್ಲ.ಈ ಪ್ರೋಟೀನ್ ಅನ್ನು ಕೋಳಿಯ ಗರ್ಭಾಶಯದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ, ಕೋಳಿಯ ಗರ್ಭಾಶಯದ ಈ ಪ್ರೋಟೀನ್ ಅನ್ನು ಮೊಟ್ಟೆಯ ರಚನೆಯಲ್ಲಿ ಬಳಸದಿದ್ದರೆ, ಮೊಟ್ಟೆಯನ್ನು ರೂಪಿಸಲು ಸಾಧ್ಯವಿಲ್ಲ. ಹೀಗಾಗಿ ಕೋಳಿಯೇ ಮೊದಲು ಎನ್ನುವ ಉತ್ತರವನ್ನ ಅಧ್ಯಯನ ನೀಡಿದೆ.

ಈ ಅಧ್ಯಯನದಲ್ಲಿ ಕಂಡು ಹಿಡಿದ ಉತ್ತರವನ್ನು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ ಇನ್ನು ಯಾರ ಬಳಿಯೂ ಕೋಳಿ ಮೊದಲೋ ಮೊಟ್ಟೆ ಮೊದಲೋ ಅನ್ನೋ ಪ್ರಶ್ನೆಯನ್ನ ಕೇಳೋವಂತಿಲ್ಲ. ಉತ್ತರ ಕೋಳಿಯೇ ಮೊದಲು ಎಂಬುವುದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version