9:24 PM Thursday 29 - January 2026

ಲಂಚ ಪಡೆಯುತ್ತಿದ್ದ ವೇಳೆ ಸಮಾಜ ಕಲ್ಯಾಣ ಇಲಾಖೆ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತರ ಬಲೆಗೆ

kantharaj
05/10/2024

ಚಿಕ್ಕಮಗಳೂರು: ಸಮಾಜ ಕಲ್ಯಾಣ ಇಲಾಖೆಯ ಕಿರುಸಾಲಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಸಮಾಜ ಕಲ್ಯಾಣ ಇಲಾಖೆ ಎಸ್.ಡಿ.ಎ. ಕಾಂತರಾಜ್ ಲೋಕ ಬಲೆಗೆ ಬಿದ್ದಿದ್ದಾರೆ.

1 ಲಕ್ಷಕ್ಕೆ 50 ಸಾವಿರ ಸಬ್ಸಿಡಿ, 50 ಸಾವಿರ ಲೋನ್ , ಲೋನ್ ಸ್ಯಾಂಕ್ಷನ್ ಮಾಡಲು 10 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆ 10 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ದಾಳಿ ನಡೆದಿದೆ.

ಲೋಕಾಯುಕ್ತ ಡಿವೈಎಸ್ ಪಿ ಹಾಗೂ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕಾಂತರಾಜ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಭ್ರಷ್ಟರ ವಿರುದ್ಧ ನಿರಂತರವಾಗಿ ಲೋಕಾಯುಕ್ತ ದಾಳಿ ನಡೆಸಲಾಗುತ್ತಿದ್ದರೂ, ಮತ್ತೆ ಮತ್ತೆ ಇಂತಹ ಪ್ರಕರಣಗಳು ಪತ್ತೆಯಾಗುತ್ತಲೇ ಇದೆ. ಲಂಚಬಾಕ ಅಧಿಕಾರಿಗಳು ಬುದ್ಧಿ ಕಲಿಯೋದು ಯಾವಾಗ ಅನ್ನೋ ಮಾತುಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version