ಅಪಘಾತಕ್ಕೀಡಾದ ಕಾರನ್ನು ಬೇರೆಡೆಗೆ ಎಳೆದೊಯ್ಯುತ್ತಿದ್ದ ವೇಳೆ ಧಗಧಗನೆ ಹೊತ್ತಿ ಉರಿದ ಕಾರು!
ಚಿಕ್ಕಮಗಳೂರು: ಅಪಘಾತಕ್ಕೀಡಾದ ಕಾರನ್ನು ಬೇರೆಡೆಗೆ ಎಳೆದೊಯ್ಯುತ್ತಿದ್ದ ವೇಳೆ ಕಾರು ಏಕಾಏಕಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ಬಳಿ ನಡೆದಿದೆ.
ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ರಸ್ತೆ ಬದಿ ಇದ್ದ ಟಿಂಬರ್ ಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಕೂಡ ಅಪಾಯದಿಂದ ಪಾರಾಗಿದ್ದರು.
ಅಪಘಾತವಾದ ಕಾರನ್ನ ಮಂಗಳೂರಿಗೆ ಎಳೆದೊಯ್ಯುವ ವೇಳೆ ಏಕಾಏಕಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಘಟನೆ ನಡೆದ ಸ್ಥಳದಿಂದ ತುಸು ದೂರಕ್ಕೆ ಕಾರು ಚಲಿಸುತ್ತಿದ್ದಂತೆಯೇ ಏಕಾಏಕಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ.
ಬೆಂಕಿ ಹತ್ತಿಕೊಂಡ ಪರಿಣಾಮ ರಸ್ತೆ ಮಧ್ಯೆ ಧಗ–ಧಗ ಉರಿದು, ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆ ಸಂಬಂಧ ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

























