ದರೋಡೆ ಮಾಡಲು ಬಂದವರೇ ದಂಪತಿಗೆ ನೂರು ರೂಪಾಯಿ ಕೊಟ್ಟು ಹೋದ್ರು!
ದೆಹಲಿ: ದಂಪತಿಯನ್ನು ಅಡ್ಡ ಹಾಕಿದ ಕಳ್ಳರು, ಹಣ ಕೊಡುವಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ತಮ್ಮ ಬಳಿಯಿದ್ದ ಕೇವಲ 20 ರೂಪಾಯಿಯನ್ನು ದಂಪತಿ ಕಳ್ಳರಿಗೆ ನೀಡಿದ್ದಾರೆ. ಕೇವಲ 20 ರೂಪಾಯಿಯನ್ನು ದಂಪತಿ ನೀಡಿದ್ದನ್ನು ಕಂಡು ಮನಕರಗಿದ ಕಳ್ಳರು ದಂಪತಿಗೆ 100 ರೂಪಾಯಿ ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ದೆಹಲಿಯಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ಈ ದರೋಡೆಕೋರರು ಉತ್ತಮ ಉದ್ಯೋಗದಲ್ಲಿದ್ದು, ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್, ಸ್ಕೂಟರ್ ಮತ್ತು 30 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 21ರಂದು ದೆಹಲಿ ಪೊಲೀಸರಿಗೆ ಸರಣಿ ಕಳ್ಳತನದ ಬಗ್ಗೆ ಫೋನ್ ಬಂದಿತ್ತು. ಒಂದೇ ಬಾರಿಗೆ ಬ್ಯಾಕ್ ಟು ಬ್ಯಾಕ್ 3 ದೂರುಗಳು ಬಂದಾಗ ಪೊಲೀಸರು ಎಚ್ಚೆತ್ತುಕೊಂಡಿದ್ದರು. ಎಲ್ಲವೂ ಪಿಸ್ತೂಲ್ ತೋರಿಸಿ ಕಳವು ಮಾಡಲು ಯತ್ನಿಸಿರುವುದು ಗೊತ್ತಾಗುತ್ತಿದ್ದಂತೆಯೇ ಒಂದೇ ತಂಡ ಈ ಕೃತ್ಯ ಮಾಡಿದೆ ಎಂದು ಪೊಲೀಸರು ಅಂದಾಜಿಸಿದ್ದರು.
ಈ ನಿಟ್ಟಿನಲ್ಲಿ 200 ಸಿಸಿ ಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಕೊನೆಗೆ ಹರ್ಷ ರಜಪೂತ್ ಹಾಗೂ ದೇವ್ ವರ್ಮಾ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ದೇವ್ ವರ್ಮಾ ಜಿಎಸ್ ಟಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಹರ್ಷ ರಜಪೂತ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























