5:18 AM Tuesday 9 - September 2025

ವಸ್ತುಗಳನ್ನು ಖರೀದಿಸುವಾಗ ಯಾಕೆ ಜಿಎಸ್ ಟಿ ಬಿಲ್ ಪಡೆಯಲೇ ಬೇಕು?: ಗ್ರಾಹಕರ ವೇದಿಕೆ ಅಧಿಕಾರಿ ಮಾಹಿತಿ

gst bill
21/06/2023

ಚಾಮರಾಜನಗರ: ಗ್ರಾಹಕರು ಮಾರುಕಟ್ಟೆಯಲ್ಲಿ ನೇರವಾಗಿ ಅಥವಾ ಆನ್ ಲೈನ್ ನಲ್ಲಿ ಯಾವುದೇ ವಸ್ತು ಕೊಂಡುಕೊಳ್ಳುವಾಗ ಕಡ್ಡಾಯವಾಗಿ ಜಿಎಸ್ ಟಿ ಬಿಲ್ ಪಡೆಯಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಆಯೋಗದ ಪ್ರಭಾರ ಅಧ್ಯಕ್ಷ ಶ್ರೀನಿಧಿ ಹೇಳಿದರು.

ನಗರದ ಮಾಯಾ ಹೋಟಲ್ ಸಭಾಂಗಣದಲ್ಲಿ ನಡೆದ ರೋಟರಿ ಸಂಸ್ಥೆಯ ಮಂಗಳವಾರದ ವಿಶೇಷ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ವ್ಯವಸ್ಥೆ ಗ್ರಾಹಕನ ಹಿತರಕ್ಷಣೆಗಾಗಿಯೇ ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಖರೀದಿಸಿದ ಯಾವುದೇ ವಸ್ತು ದೋಷಪೂರಿತವಾಗಿದ್ದಲ್ಲಿ ಅಥವಾ ಸೇವಾ ಸಂಸ್ಥೆಗಳಿಂದ ಸೇವಾನೂನ್ಯತೆಗಳಾಗಿ, ಅದರಿಂದ ಅವರಿಗೆ ಯಾವುದೇ ನಷ್ಟವಾಗಿದ್ದಲ್ಲಿ ಅವರು ನೇರವಾಗಿ ಗ್ರಾಹಕರ ವೇದಿಕೆಗೆ ತೆರಳಿ, ಆ ನಷ್ಟಕ್ಕೆ ಕಾರಣವಾದವರ ವಿರುದ್ಧ ಪ್ರಕರಣ ದಾಖಲಿಸಬಹುದು. ತಾವು ತೆತ್ತ ಬೆಲೆಯನ್ನು ಮಾತ್ರವಲ್ಲ, ಅದರೊಟ್ಟಿಗೆ ಅದರಿಂದ ತಾವು ಅನುಭವಿಸಿದ ಕಷ್ಟ, ಮಾನಸಿಕ ಯಾತನೆಗಳಿಗಾಗಿಯೂ ಸೂಕ್ತ ಪರಿಹಾರ ಮರಳಿ ಪಡೆಯಬಹುದು. ಅದಕ್ಕಾಗಿ ತಾವು ಖರೀದಿಸಿದ ವಸ್ತುಗಳ ಜಿಎಸ್ ಟಿ ಬಿಲ್ ಪಡೆದುಕೊಳ್ಳಬೇಕು ಎಂದರು.

ಆದರೆ ಬಹುತೇಕ ಗ್ರಾಹಕರು ಗ್ರಾಹಕರ ವೇದಿಕೆಯ ಸದ್ವಿನಿಯೋಗ ಮಾಡಿಕೊಳ್ಳದಿರುವುದು ಮಾತ್ರ ದುರದೃಷ್ಟಕರ. ಜಿಲ್ಲಾ ಆಯೋಗದಲ್ಲಿ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ , ರಾಜ್ಯ ಆಯೋಗ, ರಾಷ್ಟ್ರೀಯ ಅಯೋಗ, ಕೊನೆಗೆ ಸುಪ್ರೀಂ ಕೋರ್ಟ್ ಹೋಗಬಹುದು ಎಂದರು.

ಎದುರುದಾರ 45 ದಿನಗಳಲ್ಲಿ ದೂರು ಕೊಡಬೇಕು. ಇಲ್ಲದಿದ್ದರೆ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಬಹುದು. 5 ಲಕ್ಷ ದವರೆಗೆ ಉಚಿತ ಕಾನೂನು ಸೇವೆ ದೊರೆಯುತ್ತಿದೆ. 5 ಲಕ್ಷ ಮೇಲ್ಪಟ್ಟರೆ 10 ಕೋಟಿವರೆಗೆ ಹಂತಹಂತವಾಗಿ 7,500 ಶುಲ್ಕ ಇರುತ್ತದೆ. ತಾಯಿ ಗರ್ಭದೊಳಗಿರುವ ಮಗು ಕೂಡ ಗ್ರಾಹಕ. ವೈದ್ಯರು ಕೊಡುವ ಚಿಕಿತ್ಸೆ, ಔಷಧದ ವ್ಯತ್ಯಾಸದಿಂದ.ಹುಟ್ಟೋ ಮಗು ಏನಾದರೂ ತೊಂದರೆ ಇದ್ದರೆ ಪೋಷಕರು ಗ್ರಾಹಕರ ಆಯೋಗದಲ್ಲಿ ದೂರ ಸಲ್ಲಿಸಬಹುದು. ಆಯೋಗದಲ್ಲಿ ರಾಜಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವಿಷಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕೂಡ ಇರುತ್ತದೆ ಎಂದರು.ಇಂತಹ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ವಹಿಸಿದ್ದರು. ಉಪಾಧ್ಯಕ್ಷ ರಾಮಸಮುದ್ರ ನಾಗರಾಜು, ಕಾಳನಹುಂಡಿ ಗುರುಸ್ವಾಮಿ, ಪ್ರಭಾಕರ್, ಅಶೋಕ್, ಜಿ ಆರ್ ಅಶ್ವಥ್ ನಾರಾಯಣ್, ಮುಂದಿನ ಸಾಲಿನ ಅಧ್ಯಕ್ಷರಾದ ಚಂದ್ರಪ್ರಭಾ ಜೈನ್, ಕಾರ್ಯದರ್ಶಿ ದೀನ , ಖಜಾಂಚಿ ಸುರೇಶ್, ಮಾಯಾ ಗಾರ್ಡನ್ ಮಾಲೀಕರಾದ ವೆಂಕಟೇಶ್ , ಸಿದ್ದ ಮಲ್ಲಪ್ಪ, ಸಿದ್ದರಾಜು, ಸುಭಾಷ್, ಪ್ರಕಾಶ್, ಯೋಗಣ್ಣ, ಎಸ್ ಆರ್ ಎಸ್ ಶ್ರೀನಿವಾಸ್, ಬಿಕೆ ಮೋಹನ್, ರಾಮು,ಮತ್ತು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಇತರರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version