ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ: ಸಮಾಜವಾದಿ ಪಕ್ಷದ ಮುಖಂಡ ಅರೆಸ್ಟ್
03/02/2024
ಪ್ರತಾಪಗಢ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿರುವ ಆರೋಪದಡಿಯಲ್ಲಿ ಸ್ಥಳೀಯ ಸಮಾಜವಾದಿ ಪಕ್ಷದ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಎಸ್.ಪಿ. ಮುಖಂಡ ಜಾವೇದ್ ಅಹ್ಮದ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಪತ್ನಿ ಕೂಡ ಇದೇ ಪ್ರಕರಣದ ಮತ್ತೋರ್ವ ಆರೋಪಿಯಾಗಿದ್ದಾಳೆ. ಪತಿಯ ಬಂಧನದ ನಡುವೆ ಆಕೆ ತಲೆಮರೆಸಿಕೊಂಡಿದ್ದಾಳೆ ಎಂದು ಪ್ರತಾಪಗಢದ ಪಟ್ಟಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಎಸ್.ಪಿ. ಮುಖಂಡ ಜಾವೇದ್ ಅಹ್ಮದ್ ಮತ್ತು ಸಂತ್ರಸ್ತ ಮಹಿಳೆಯು ಸ್ನೇಹಿತರಾಗಿದ್ದು, ಆಗಾಗ್ಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಆ ಬಳಿಕ ಮದುವೆಯಾಗುವುದಾಗಿ ಹೇಳಿ, ದೇಹ ಸಂಬಂಧವನ್ನೂ ಬೆಳೆಸಿದ್ದ.
ಸಂತ್ರಸ್ತೆ ಗರ್ಭಿಣಿಯಾದ ನಂತರ ಜಾವೇದ್ ಅಹ್ಮದ್, ತನ್ನ ಪತ್ನಿ ಸಲ್ಮಾ ಬೇಗಂ ಸಹಾಯದಿಂದ ಗರ್ಭಪಾತ ಮಾಡಿಸಿದ್ದ. ಮದುವೆಯಾಗುವಂತೆ ಕೇಳಿದಾಗ, ಬೆದರಿಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

























