9:53 PM Wednesday 22 - October 2025

ಸರ್ಕಾರಿ ಬಸ್ ಕಾದು ಸುಸ್ತಾದ ಮಹಿಳೆಯರು: ಹೊರನಾಡಿಗೆ ಸಾಗಲು ಮಹಿಳೆಯರ ಪರದಾಟ

17/06/2023

ಕೊಟ್ಟಿಗೆಹಾರ: ಸರ್ಕಾರ ಉಚಿತ ಪ್ರಯಾಣಕ್ಕಾಗಿ ಮಹಿಳೆಯರು ಹೊರನಾಡು ಪ್ರವಾಸಿ ತಾಣಕ್ಕೆ ಸಾಗಲು ಪರದಾಡುವಂತಾಗಿದೆ.

ಬೆಳಿಗ್ಗೆಯಿಂದಲೇ ಹರಿಹರ, ಹೊಸಪೇಟೆ, ಶಿವಮೊಗ್ಗ, ಬೇಲೂರು ಮತ್ತಿತರ ಕಡೆಯಿಂದ ಸರ್ಕಾರಿ ಬಸ್ ನಲ್ಲಿ ಮಹಿಳೆಯರು ಕೊಟ್ಟಿಗೆಹಾರ ಬಸ್ ನಿಲ್ದಾಣಕ್ಕೆ ಬಂದಿಳಿದು ಹೊರನಾಡು ದೇವಸ್ಥಾನಕ್ಕೆ ಸಾಗಲು ಬಸ್ ಕಾಯುತ್ತಿದ್ದಾರೆ. ಆದರೆ ಕೊಟ್ಟಿಗೆಹಾರದಿಂದ ಹೊರನಾಡಿಗೆ ಸರ್ಕಾರಿ ಬಸ್ ಸಂಜೆ 3:30ಗೆ ಕೆಲವೇ ಬಂದ ಬಸ್ ಗಳು ಇರುವುದರಿಂದ ಬಸ್ ಗಳೆಲ್ಲವೂ ಭರ್ತಿಯಾಗಿರುವ ಬರುತ್ತಿವೆ. ಇದರಿಂದ ಬೆಳಿಗ್ಗೆಯಿಂದಲೇ ವಿವಿಧ ಊರುಗಳಿಂದ ಬಂದ ಮಹಿಳೆಯರು ಬಸ್ ಕಾದು ಸುಸ್ತಾಗುತ್ತಿದ್ದಾರೆ.

 

ಬಸ್ ಕಾಯುತ್ತೇವೆ ಇಲ್ಲವಾದರೆ ಬಸ್ ನಿಲ್ದಾಣದಲ್ಲೇ ಮಲಗುತ್ತೇವೆ. ಸರ್ಕಾರ ಹೊರನಾಡಿಗೆ ಹೆಚ್ಚು ಬಸ್ ಗಳನ್ನು ಬಿಟ್ಟು ಮಹಿಳೆಯರಿಗೆ ದೇವಸ್ಥಾನಕ್ಕೆ ತೆರಳಲು ಸಹಕರಿಸಬೇಕು ಎಂದು ಬೇಲೂರಿನ ಮಹಿಳೆ ಶಕುಂತಲಾ ಮಹಾನಾಯಕಕ್ಕೆ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ರಾಜ್ಯದ ಒಳಗಡೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವುದು ಸಂತಸ ತಂದಿದೆ.ಆದರೆ ಬಸ್ ಗಳ ಕೊರತೆಯಿಂದ ನಿರೀಕ್ಷಿತ ಸಮಯಕ್ಕೆ ತಲುಪಲಾಗುತ್ತಿಲ್ಲ.ಬಸ್ ಪ್ರಯಾಣಿಕರಿಂದ ಭರ್ತಿಯಾಗಿ ಬರುವುದರಿಂದ ಬಸ್ ಹತ್ತಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version