11:51 AM Wednesday 15 - October 2025

ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಮೇಲೆ ಆಟೋ ಚಾಲಕ, ಆತನ ಸ್ನೇಹಿತನಿಂದ ಅತ್ಯಾಚಾರ

yadagiri
28/04/2022

ಯಾದಗಿರಿ: ಕೆಲಸ ಮುಗಿಸಿ ಆಟೋದಲ್ಲಿ ತೆರಳುತ್ತಿದ್ದ  ಯುವತಿಯ ಮೇಳೆ ಹಾಡಹಗಲೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ತಾಲೂಕಿನ ಗ್ರಾಮವೊಂದರ ಯುವತಿ ಮನೆ ಕೆಲಸ ಮಾಡುತ್ತಿದ್ದು, ಏಪ್ರಿಲ್ 26ರಂದು ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಆಟೋ ಚಾಲಕ ಹನುಮಂತ್ ಜಿನಕೇರಿ ಎಂಬಾತ ರಸ್ತೆ ಮಧ್ಯೆ ತನ್ನ ಸ್ನೇಹಿತ ನರಸಪ್ಪನನ್ನು ಆಟೋಗೆ ಹತ್ತಿಸಿಕೊಂಡಿದ್ದು, ಯಾದಗಿರಿ ನಗರಕ್ಕೆ ಬರುವ ವೇಳೆ ಯುವತಿಯು ಆಟೋ ನಿಲ್ಲಿಸಿ ಎಂದು ಹೇಳಿದ್ದಾಳೆ. ಆದರೆ ಡೀಸೆಲ್ ಹಾಕಿಸುವ ನೆಪ ಹೇಳಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ನಿರ್ಜನ ಪ್ರದೇಶದಲ್ಲಿದ್ದ ಪಾಳು ಬಿದ್ದ ಮನೆಗೆ ಕರೆದೊಯ್ದ ಆರೋಪಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಚಾರ ಯಾರಿಗಾದರೂ ತಿಳಿಸಿದರೆ, ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಘಟನೆ ಸಂಬಂಧ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕ ಹನುವಂತ್ ಹಾಗೂ ನರಸಪ್ಪನನ್ನು  ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋರಿಕ್ಷಾ ಸ್ಕೂಟರ್ ಗೆ ಡಿಕ್ಕಿ: ಇಬ್ಬರು ಧರ್ಮಗುರುಗಳಿಗೆ ಗಾಯ

ಪ್ರಧಾನಿ ಮಾತನಾಡುತ್ತಿರುವ ವೇಳೆ ಕೇಜ್ರಿವಾಲ್ ಹೀಗಾ ಮಾಡೋದು?: ಬಿಜೆಪಿ ಮುಖಂಡರಿಂದ ಆಕ್ರೋಶ

ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಳಗೆ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

Exit mobile version