ಹೊಟ್ಟೆನೋವೆಂದು ಹೇಳಿದ ಯುವಕ: ಹೊಟ್ಟೆಯಲ್ಲಿ ಕತ್ತಿ ಮತ್ತು ನೈಲ್ ಕಟ್ಟರ್ ನೋಡಿ ವೈದ್ಯರೇ ಶಾಕ್..!

26/08/2024

ತೀವ್ರ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಯುವಕನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ವೈದ್ಯರು ಹೌಹಾರಿದ್ದಾರೆ. ಬಿಹಾರದ 22 ವರ್ಷದ ಯುವಕನ ಹೊಟ್ಟೆಯಿಂದ ಕತ್ತಿ ಮತ್ತು ನೈಲ್ ಕಟ್ಟರನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ತೀವ್ರ ಹೊಟ್ಟೆ ನೋವಿನ ಕಾರಣ ಮನೆಯವರು ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ಬಳಿಕ ನಡೆಸಲಾದ ಪರೀಕ್ಷೆಯ ವೇಳೆ ಹೊಟ್ಟೆಯೊಳಗೆ ಕತ್ತರಿ ಮತ್ತು ಇನ್ನಿತರ ವಸ್ತುಗಳು ಇರುವುದು ಬಹಿರಂಗವಾಯಿತು.

ಎಕ್ಸ್ರೇ ಯ ಬಳಿಕ ಆತನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಹೊರತೆಗೆಯಾಯಿತು. ನಾಲ್ಕು ಇಂಚು ಉದ್ದದ ಕತ್ತಿ, ಎರಡು ಬೀಗದ ಕಿ, ಎರಡು ನೈಲ್ ಕಟ್ಟರ್ ಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಯಿತು. ಆತನಿಗೆ ತುಸು ಮಾನಸಿಕ ಅಸ್ವಸ್ಥತೆ ಇದ್ದು ಆತ ಇದನ್ನು ನುಂಗಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಿಂದ ನಾನು ಲೋಹ ವಸ್ತುಗಳನ್ನು ನುಂಗಲು ಪ್ರಾರಂಭಿಸಿದ್ದೇನೆ ಎಂದಾತ ಹೇಳಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version