12:26 AM Tuesday 9 - September 2025

ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದು ಯುವಕ ಅಸ್ವಸ್ಥ: ಆಸ್ಪತ್ರೆಗೆ ದಾಖಲು

red bul
05/02/2024

ಕೊಡಗು: ಯುವಕನೋರ್ವ ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದ ನಂತರ ಅಸ್ವಸ್ಥವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನೋದ್(27) ಅಸ್ವಸ್ಥಗೊಂಡ ಯುವಕನಾಗಿದ್ದಾನೆ. ಮಡಿಕೇರಿಯ ಶಾಪ್ ವೊಂದರಿಂದ ಎನರ್ಜಿ ಡ್ರಿಂಕ್ ರೆಡ್ ಬುಲ್ ಖರೀದಿಸಿ ಕುಡಿದ ಬಳಿಕ ವಿನೋದ್ ಅಸ್ವಸ್ಥಗೊಂಡಿದ್ದ ಎನ್ನಲಾಗಿದೆ.

ರೆಡ್ ಬುಲ್ ಟಿನ್ ಒಳಗೆ ಲೋಳೆಯಂತ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸದ್ಯ ಘಟನೆ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಕಾರಣವಾದ ಎನರ್ಜಿ ಡ್ರಿಂಕ್ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

ಇತ್ತೀಚಿನ ಸುದ್ದಿ

Exit mobile version