11:31 PM Tuesday 27 - January 2026

ಯುವತಿಯ ತೋಳಿಗೆ 6 ಬಾರಿ ಕೊರೊನಾ ಲಸಿಕೆ ಚುಚ್ಚಿದ ನರ್ಸ್

covid vaccine
11/05/2021

ವಾಟಿಕನ್: ನರ್ಸ್ ವೊಬ್ಬರು ಮಾಡಿದ ಯಡವಟ್ಟಿನಿಂದ ಯುವತಿಯೊಬ್ಬಳಿಗೆ 6 ಡೋಸ್ ಕೊರೊನಾ ಲಸಿಕೆ ಕೊರೊನಾ ಲಸಿಕೆ ಪಡೆದಿರುವ ಘಟನೆ ಇಟೆಲಿಯ ಟುಸ್ಕಾನಿ ಎಂಬಲ್ಲಿ ನಡೆದಿದೆ.

ಯುವತಿ ಲಸಿಕೆ ಪಡೆಯಲು ಬಂದಾಗ ನರ್ಸ್ ಒಬ್ಬಳು ಫೈಜರ್ ಲಸಿಕೆಯನ್ನು ಯುವತಿಯ ತೋಳಿಗೆ ಆರು ಬಾರಿ ಚುಚ್ಚಿದ್ದಾಳೆ.  ವೈದ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ನರ್ಸ್ ನ್ನು ಅಮಾನತು ಮಾಡಲಾಗಿದೆ.

ಆರು ಡೋಸ್ ಲಸಿಕೆ ಪಡೆದರೂ ಯುವತಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಹೇಳಲಾಗಿದೆ. ಜರ್ಮನಿ, ಅಮೆರಿಕ, ಇಸ್ರೇಲ್ ಹಾಗೂ ಆಸ್ಟ್ರೇಲಿಯಾದಲ್ಲಿಯೂ ಫೈಜರ್ ಲಸಿಕೆಯ ಓವರಡೋಸ್ ಪ್ರಕರಣಗಳು ಪತ್ತೆಯಾಗಿತ್ತು.

ಇತ್ತೀಚಿನ ಸುದ್ದಿ

Exit mobile version