ಉಂಗುರ, ತಾಯತ ಮಾರುತ್ತಿದ್ದ ಬಾಬಾನ ಖಾತೆಯಲ್ಲಿ 106 ಕೋಟಿ ರೂ. ಪತ್ತೆ!

chhangur baba
10/07/2025

ಉತ್ತರ ಪ್ರದೇಶ(Mahanayaka): ಒಂದು ಕಾಲದಲ್ಲಿ  ಸೈಕಲ್ ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಧರ್ಮ ಮತಾಂತರ ಗ್ಯಾಂಗ್‌ ನ ಮಾಸ್ಟರ್‌ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ(Jamaluddin alias Chhangur Baba)ನ ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 106 ಕೋಟಿ ರೂ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.

ಮತಾಂತರ ಜಾಲಕ್ಕೆ ಸಂಬಂಧಿಸಿದಂತೆ ಶನಿವಾರ ಲಕ್ನೋದ ಹೋಟೆಲ್‌ನಿಂದ ಛಂಗೂರ್ ಬಾಬಾ ಮತ್ತು ಅವನ ಆಪ್ತ ಸಹಚರ ನೀತು ಅಲಿಯಾಸ್ ನಸ್ರೀನ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾನ ಬಳಿ ಸುಮಾರು 40 ಬ್ಯಾಂಕ್ ಖಾತೆಗಳು  ಪತ್ತೆಯಾಗಿದ್ದು, ಈ ಖಾತೆಗಳಲ್ಲಿ ಬರೋಬ್ಬರಿ 106 ಕೋಟಿ ರೂಪಾಯಿಗಳು ಪತ್ತೆಯಾಗಿವೆ. ಅಲ್ಲದೇ ಎರಡು ಕೋಟಿಯಷ್ಟು ಮೌಲ್ಯದ ಆಸ್ತಿಗಳೂ ಪತ್ತೆಯಾಗಿವೆ.

ಈ ಹಣವನ್ನು ಮುಖ್ಯವಾಗಿ ಮಧ್ಯಪ್ರಾಚ್ಯದಿಂದ ಪಡೆಯಲಾಗಿದೆ. ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗಗಳು ಮತ್ತು ವಿಧವೆಯರನ್ನು ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆಗಳು ಅಥವಾ ಬೆದರಿಕೆಯ ಮೂಲಕ ಮತಾಂತರಗೊಳಿಸಲಾಗುತ್ತಿದೆ ಎಂದು ಛಂಗೂರ್ ಬಾಬಾನ ವಿರುದ್ಧ  ಆರೋಪ ಕೇಳಿ ಬಂದಿತ್ತು.

ಸದ್ಯ ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಈ ಗ್ಯಾಂಗ್‌ ಗೆ ಯಾವುದೇ ಭಯೋತ್ಪಾದಕ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿದೆ. ಈ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಯುಪಿ ವಿಶೇಷ ಕಾರ್ಯಪಡೆ (ಎಸ್‌ ಟಿಎಫ್) ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version