ದುರಂತ: ಡೊಮಿನಿಕನ್ ರಿಪಬ್ಲಿಕ್ ನಲ್ಲಿ ಸ್ಫೋಟ: 11 ಮಂದಿ ಸಾವು
ಡೊಮಿನಿಕನ್ ರಿಪಬ್ಲಿಕ್ ನ ಸಣ್ಣ ಪಟ್ಟಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 10 ಮಂದಿ ಕಾಣೆಯಾಗಿದ್ದಾರೆ. ಹಾಗೆಯೇ ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ಲೂಯಿಸ್ ಅಬಿನಾಡರ್ ಮಂಗಳವಾರ ತಿಳಿಸಿದ್ದಾರೆ.
ರಾಜಧಾನಿ ಸ್ಯಾಂಟೊ ಡೊಮಿಂಗೊದಿಂದ 30 ಕಿಲೋಮೀಟರ್ (18 ಮೈಲಿ) ಗಿಂತ ಕಡಿಮೆ ದೂರದಲ್ಲಿರುವ ಸ್ಯಾನ್ ಕ್ರಿಸ್ಟೋಬಲ್ ನ ವಾಣಿಜ್ಯ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
ಉನ್ನತ ತುರ್ತು ಅಧಿಕಾರಿ ಜುವಾನ್ ಮ್ಯಾನುಯೆಲ್ ಮೆಂಡೆಜ್ ಅವರು ಸ್ಪೋಟದಲ್ಲಿ ಉಂಟಾದ ಸಾವಿನ ಸಂಖ್ಯೆಯನ್ನು ಬಿಡುಗಡೆ ಮಾಡಿದರು. ಹೆಚ್ಚಿನ ಅವಶೇಷಗಳನ್ನು ಗುರುತಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
“11 (ಗುರುತಿಸಲಾದ ಶವಗಳು) ಇವೆ, ಆದರೆ ಹೆಚ್ಚಿನ ಶವಗಳಿವೆ” ಎಂದು ಅವರು ಹೇಳಿದ್ದಾರೆ.
ಗಾಯಗೊಂಡ 59 ಜನರಲ್ಲಿ 37 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಬಿನಾದರ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಕಾಣೆಯಾದವರನ್ನು ಹುಡುಕಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು. ಮೃತರಲ್ಲಿ ನಾಲ್ಕು ತಿಂಗಳ ಮಗುವೂ ಸೇರಿದೆ.

























