ತಂದೆಯ ಸಾವು: ಖಿನ್ನತೆಗೊಳಗಾಗಿ ಅಣ್ಣ, ತಂಗಿ ಆತ್ಮಹತ್ಯೆ; ತಾಯಿಯೂ ದುರ್ಮರಣ

12/09/2023

ಇತ್ತೀಚಿಗೆ ನಡೆದ ತಂದೆಯ ಸಾವಿನಿಂದಾಗಿ ಖಿನ್ನತೆಗಾಗಿ ಒಳಗಾಗಿದ್ದ ಅಣ್ಣ, ತಂಗಿ ಹಾಗೂ ಇವರಿಬ್ಬರ ತಾಯಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಓಡಿಶಾದ ಬಗಢ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಬನ್ಸಿಧರ್‌ ಸಾಹೂ ಹಾಗೂ ಸುವರ್ಣ ಮಹಜನ್‌ ಎಂದು ಗುರುತಿಸಲಾಗಿದೆ. ಈ ಇಬ್ಬರ ತಂದೆ ಅರ್ಜುನ್‌ ಸಾಹು ಎಂಬುವವರು ಸೆಪ್ಟೆಂಬರ್ 6ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರಿಂದಾಗಿ ಬನ್ಸಿಧರ್‌, ಸುವರ್ಣ ಹಾಗೂ ತಾಯಿ ಕುಮುದಿನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೂವರು ತಮ್ಮ ಮನೆಯಲ್ಲೇ ವಿಷ ಸೇವಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ನೆರೆಹೊರೆಯವರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಬಾಗಿಲು ಒಡೆದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರನ್ನು ಚಿಕಿತ್ಸೆಗಾಗಿ ಸೊಹೆಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ದಾಖಲಿಸಲಾಗಿತ್ತು. ಇದೇ ವೇಳೆ ಬನ್ಸಿಧರ್ ಸಾವನ್ನಪ್ಪಿದ್ದಾರೆ. ಆತನ ಸಹೋದರಿ ಸುವರ್ಣಾ ಬುರ್ಲಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಗೊಳ್ಳುವಾಗ ಸಾವನ್ನಪ್ಪಿದ್ದಾಳೆ.

ತಾಯಿ ಕುಮುದಿನಿಯ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಖಿನ್ನತೆಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಆತ್ಮಹತ್ಯೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಪದಂಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಬಿಭೂತಿ ಭೋಯ್ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version