4:32 PM Saturday 18 - October 2025

ಸೋಲಿನ ಸುಳಿವು ಸಿಗುತ್ತಿದ್ದಂತೆಯೇ ಟ್ರಂಪ್ ನ ಪರಿಸ್ಥಿತಿ ಏನಾಗಿದೆ ನೋಡಿ

04/11/2020

ವಾಷಿಂಗ್ಟನ್: ಚುನಾವಣೆಯಲ್ಲಿ ಗೆದ್ದೇ ಬಿಡುತ್ತೇನೆ ಎಂಬ ಭ್ರಮೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಈಗ ಸೋಲು ಖಚಿತವೆಂಬುವುದು ಗೋಚರಿಸುತ್ತಿದ್ದಂತೆಯೇ,  “ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ” ಎಂದು ಹೇಳಿಕೆ ನೀಡಿದ್ದಾರಲ್ಲದೇ, ನಾನು ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.


ಶ್ವೇತಭವನದಲ್ಲಿಂದಯ ಮಾತನಾಡಿದ ಅವರು, ನಾನು ಗೆಲ್ಲುತ್ತೇನೆ ಎಂದು ಬಹುದೊಡ್ಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದೆವು. ಆದರೆ ಅದನ್ನು ದಿಢೀರನೇ ನಿಲ್ಲಿಸಬೇಕಾಯಿತು.  ಅಮೆರಿಕ ಜನರನ್ನ ವಂಚಿಸಲಾಗುತ್ತಿದೆ ಎಂದು ಅಸಹಾಯಕ ಹೇಳಿಕೆ ನೀಡಿದ್ದಾರೆ.


ಸೋಲು ಪಕ್ಕಾ ಎಂದು ಆಗುತ್ತಿದ್ದಂತೆಯೇ ಟ್ರಂಪ್ ಮಾನಸಿಕವಾಗಿ ತೀವ್ರ  ಕುಗ್ಗಿ ಹೋಗಿದ್ದಾರೆ. ಮತದಾನದ ಕೆಲಸ ಮುಗಿದ ಬಳಿಕ ನಾನು ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ. ಚುನಾವಣೆಯ ಕುರಿತು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.


ಇತ್ತೀಚಿನ ಸುದ್ದಿ

Exit mobile version