5:55 PM Wednesday 20 - August 2025

ಗಾಡಿ ಅಂಗಡಿಗೆ ಮೂತ್ರ ವಿಸರ್ಜನೆ ಮಾಡಿದ ಪೊಲೀಸ್ ಪೇದೆ!

police kanpur
04/11/2023

ಕಾನ್ಪುರ: ಕಾನೂನನ್ನು ಕಾಯ ಬೇಕಿದ್ದ ಪೊಲೀಸ್ ಪೇದೆಗಳಿಬ್ಬರು ತಾವೇ ಸಾರ್ವಜನಿಕರೊಂದಿಗೆ  ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿರುವ ಘಟನೆ ಕಾನ್ಪುರ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.

ಹೇಮಂತ್ ಕುಮಾರ್ ಮತ್ತು ಲೋಕೇಶ್ ರಜಪೂತ್ ಎಂಬ ಇಬ್ಬರು ಪೊಲೀಸ್ ಪೇದೆಗಳು ತಿಂಡಿ ತಿನ್ನಲು ಸ್ಥಳೀಯ ಗಾಡಿ ಅಂಗಡಿಯೊಂದಕ್ಕೆ ಹೋಗಿದ್ದರು. ಕುಡಿತದ ಮತ್ತಿನಲ್ಲಿದ್ದ ಇಬ್ಬರು ಕೂಡ, ಅಂಗಡಿ ಮಾಲಿಕನ ಜೊತೆಗೆ ಜಗಳ ಆರಂಭಿಸಿದ್ದಾರೆ. ಜಗಳದ ವೇಳೆ ಲೋಕೇಶ್ ರಜಪೂತ್ ಗಾಡಿ ಅಂಗಡಿಯ ಮೇಲೆ ಮೂತ್ರ ವಿಸರ್ಜನೆ ನಡೆಸಿದ್ದಾನೆ.

ಇಬ್ಬರು ಪೊಲೀಸ್ ಪೇದೆಗಳು ಈ ದುಷ್ಕೃತ್ಯ ಎಸಗುತ್ತಿರುವಾಗ ಸಾರ್ವಜನಿಕರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲೇ ಇತರ ಪೊಲೀಸರು ಇದ್ದರೂ ಅವರು ಪೊಲೀಸ್ ಪೇದೆಗಳನ್ನು ತಡೆಯಲು ಮುಂದಾಗಲಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version