3:15 AM Wednesday 15 - October 2025

ದಂಗಲ್ ಹೀರೋಯಿನ್ ಗಾಗಿ ವಿಚ್ಛೇದನ ಪಡೆದರೇ ಅಮೀರ್ ಖಾನ್? | ಹೀಗೊಂದು ಚರ್ಚೆ!

aamir khan fatima
04/07/2021

ಸಿನಿಡೆಸ್ಕ್: ನಟ ಅಮಿರ್ ಖಾನ್ ಹಾಗೂ ನಿರ್ಮಾಪಕಿ ಕಿರಣ್ ರಾವ್ ವಿಚ್ಛೇದನದ ಬೆನ್ನಲ್ಲೇ ಇದೀಗ ಅಮೀರ್ ಖಾನ್ ಅವರ ದಂಗಲ್ ಸಿನಿಮಾದಲ್ಲಿ ಗೀತಾ ಪೊಗಾಟ್ ಪಾತ್ರ ನಿರ್ವಹಿಸಿದ್ದ ಫಾತಿಮಾ ಸೈನಾ ಷೇಕ್ ಹೆಸರು ಚರ್ಚೆಗೀಡಾಗಿದ್ದು, ಫಾತಿಮಾಗಾಗಿ ಅಮೀರ್ ಖಾನ್ ವಿಚ್ಛೇದನ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ದಂಗಲ್ ಹಾಗೂ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ ಫಾತಿಮಾ ನಟಿಸಿದ್ದರು. ಇದಾದ ಬಳಿಕ ಇವರಿಬ್ಬರ ವೈಯಕ್ತಿಕ ಸಂಬಂಧಗಳ ಬಗ್ಗೆ ಹಲವಾರು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಲೇ ಇದ್ದವು.

ಇನ್ನೂಅಮೀರ್ ಹಾಗೂ ಫಾತಿಮಾ ನಡುವೆ ಸಂಬಂಧವಿದೆ. ಹೀಗಾಗಿ ಅಮೀರ್ ಪತ್ನಿ ಕಿರಣ್ ನೊಂದಿದ್ದಾರೆ ಎಂಬ ವರದಿಗಳು ಕೂಡ ಪ್ರಕಟವಾಗಿದ್ದವು ಎಂದು ಹೇಳಲಾಗಿದೆ. ಈ ವರದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಫಾತಿಮಾ, ನಾನು ಭೇಟಿ ಮಾಡದೇ ಇರುವ ವ್ಯಕ್ತಿಗಳು ನನ್ನ ಬಗ್ಗೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಇದರಲ್ಲಿ ಸತ್ಯ ಇದೆಯೇ ಇಲ್ಲವೇ ಎನ್ನುವುದು ಕೂಡ ಅವರಿಗೆ ಗೊತ್ತಿಲ್ಲ . ನಾನು ಇದನ್ನು ನಿರ್ಲಕ್ಷ್ಯಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ನಟ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ತಮ್ಮ 15 ವರ್ಷಗಳ ವೈವಾಹಿಕ ಸಂಬಂಧದ ಬಳಿಕ ಬೇರೆ ಬೇರೆಯಾಗಿದ್ದಾರೆ. ಇದು ಅವರ ಅಭಿಮಾನಿಗಳಿ ಅಚ್ಚರಿಯನ್ನೂ ತಂದಿತ್ತು. ಈ ನಡುವೆ ಫಾತಿಮಾ ಹೆಸರು ಕೇಳಿ ಬಂದಿದ್ದು, ಫಾತಿಮಾಗಾಗಿ ಅಮೀರ್ ಖಾನ್ ಕಿರಣ್ ಗೆ ಡಿವೋರ್ಸ್ ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version