ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿಗೆ ನಟ ದರ್ಶನ್ ನೆರವು

darshan
09/09/2023

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಟ ದರ್ಶನ್ ಅವರ ಅಭಿಮಾನಿ ಆದರ್ಶ್ ಎಂಬವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡ ಬಳಿಕ ಈ ವಿಚಾರ ತಿಳಿದು ಬಂದಿದೆ.

ನನ್ನ ಎರಡು ಕಿಡ್ನಿಗಳು ಕೂಡ ಫೆಲ್ಯೂರ್ ಆಗಿದೆ. ಮೊದಲಿನಿಂದಲೂ ದರ್ಶನ್ ಸರ್ ರನ್ನು ನೋಡಬೇಕು ಅಂತ ಆಸೆ ಇತ್ತು. ದರ್ಶನ್ ಅವರ ಆಪ್ತರಾದ ನಾಗರಾಜ್ ಅಣ್ಣ ಅವರ ಬಳಿ ಕೇಳಿ ಕೊಂಡೆ, ಅವರು ದರ್ಶನ್ ಅವರನ್ನು ಭೇಟಿ ಮಾಡಿಸಿದರು ಎಂದು ಆದರ್ಶ್ ತಿಳಿಸಿದ್ದಾರೆ.

ಆದರ್ಶ್ ಈ ವಿಚಾರವನ್ನು ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version