10:08 AM Saturday 23 - August 2025

ದಯವಿಟ್ಟು ಈಗ  ಅದರ ಬಗ್ಗೆ ಏನೂ ಕೇಳ್ಬೇಡಿ: ದಾವಣಗೆರೆಯಲ್ಲಿ ರಮ್ಯಾ ಹೇಳಿಕೆ

ramya
17/10/2022

ನಟ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ ಹೆಡ್ ಬುಷ್ ಚಿತ್ರ ಅಕ್ಟೋಬರ್ 21ರಂದು ತೆರೆಗೆ ಬರಲಿದೆ. ಈ ನಡುವೆ ಹೆಡ್ ಬುಷ್ ಚಿತ್ರದ ಪ್ರಚಾರಕ್ಕೆ ದಾವಣಗೆರೆಗೆ ಮೋಹಕ ತಾರೆ  ನಟಿ ರಮ್ಯಾ ಭೇಟಿ ನೀಡಿದ್ದಾರೆ.

ದಾವಣಗೆರೆ ಡೆಂಟಲ್ ಕಾಲೇಜ್ ರೋಡ್ ನಲ್ಲಿರುವ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೊಟೇಲ್ ನಲ್ಲಿ ದೋಸೆ ಸವಿದ ರಮ್ಯಾ, ಹಳ್ಳಿಯಿಂದ ಬರುವ ಬೆಣ್ಣೆಯಿಂದ ಇಲ್ಲಿ ಬೆಣ್ಣೆ ದೋಸೆ ಮಾಡ್ತಾರೆ. ಹಾಗಾಗಿ  ನಿಜವಾದ ರುಚಿ ಇರುತ್ತದೆ ಅಂದ್ರು. ಜೊತೆಗೆ ಚಟ್ನಿಯ ರುಚಿಯನ್ನೂ ಬಣ್ಣಿಸಿದ್ರು.

ಇದೇ ವೇಳೆ ರಮ್ಯಾ ಹಾಗೂ ರಾಜ್ ಬಿ. ಶೆಟ್ಟಿ ನಟಿಸಲಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಚಿತ್ರವನ್ನು ನಾನೇ ಪ್ರೊಡ್ಯೂಸ್ ಮಾಡ್ತಿದ್ದೇನೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆದ್ಮೇಲೆ ಇದರ ಬಗ್ಗೆ ನಾನು ಮಾತನಾಡ್ತೇನೆ. ದಯವಿಟ್ಟು ಈಗ ಅದರ ಬಗ್ಗೆ ಏನೂ ಕೇಳಬೇಡಿ ಅಂದ್ರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version