ಸಿಬ್ಬಂದಿ ಅಸಹಕಾರದಿಂದ ಏರ್ ಇಂಡಿಯಾ ತತ್ತರ: ಸೌದಿಗೆ ಹೋಗುವ ವಿಮಾನ ಹಾರಾಟ ರದ್ದು

ಸಿಬ್ಬಂದಿಗಳ ಅಸಹಕಾರವು ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಸಂಕಷ್ಟಕ್ಕೆ ದೂಡಿದೆ.. ಸೌದಿ ಅರೇಬಿಯಾದಿಂದ ಭಾರತಕ್ಕೆ ನಿಗದಿಪಡಿಸಲಾಗಿರುವ ಹಲವಾರು ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ. ಮೇ 12 ರ ವರೆಗಿರುವ ಎಲ್ಲಾ ಸರ್ವಿಸ್ ಗಳನ್ನು ರದ್ದು ಪಡಿಸಿರುವುದಾಗಿ ತಿಳಿಸಲಾಗಿದೆ.
ರಿಯಾದ್, ಜಿದ್ದಾ ಸೆಕ್ಟರ್ ಗಳಿಂದ ಕೊಯ್ಕೋಡ್ ಕಣ್ಣೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿರುವ ಎಲ್ಲಾ ವಿಮಾನ ಸರ್ವಿಸ್ ಗಳನ್ನು ಕೂಡ ರದ್ದುಪಡಿಸಲಾಗಿದೆ. ಹಾಗೆಯೇ ಉಳಿದ ರಾಜ್ಯಗಳಿಗೆ ಇರುವ ಸರ್ವಿಸ್ ಗಳನ್ನು ಕೂಡ ರದ್ದುಪಡಿಸಲಾಗಿದೆ. ಮುಖ್ಯವಾಗಿ ರಿಯಾದ್, ದಮಾಮ್ ಮತ್ತು ಜಿದ್ದಾ ವಿಮಾನ ನಿಲ್ದಾಣದಿಂದ ಭಾರತಕ್ಕೆ ಹಾರಾಟ ನಡೆಸಲಿರುವ ಎಲ್ಲಾ ವಿಮಾನ ಸೇವೆಗಳನ್ನು ಕೂಡ ಮೇ 12ರವರೆಗೆ ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಅನಿವಾಸಿ ಭಾರತೀಯರು ವಿಶೇಷವಾಗಿ ಕನ್ನಡಿಗರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth