ಇಸ್ರೇಲ್ ದಾಳಿ ಮತ್ತಷ್ಟು ತೀವ್ರ: ರಫಾದಿಂದ ಲಕ್ಷಕ್ಕಿಂತಲೂ ಅಧಿಕ ಜನರ ಪಲಾಯನ

ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದಂತೆಯೇ ರಫಾದಿಂದ ರೂ.1,10,000 ಸಾವಿರಕ್ಕಿಂತಲೂ ಅಧಿಕ ಮಂದಿ ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಗಾಝಾದ ಯಾವ ಜಾಗವೂ ಸುರಕ್ಷಿತವಲ್ಲ. ಇಡೀ ಗಾಝಾದಲ್ಲಿ ಅಪಾಯ ಭೀತಿ ಆವರಿಸಿದೆ. ಕದನ ವಿರಾಮದ ಹೊರತು ಬೇರೆ ದಾರಿಯೇ ಇಲ್ಲ ಎಂದು ವಿಶ್ವ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ರಫ ದಿಂದ ಪಲಾಯನ ಮಾಡಿ ಎಂದು ಮೇ 6ರಂದೇ ಇಸ್ರೇಲ್ ಕರೆ ನೀಡಿತ್ತು. ಮರುದಿನವೇ ಗಾಜಾ ಮತ್ತು ಈಜಿಪ್ಟ್ ಗಡಿಯನ್ನು ಜೋಡಿಸುವ ರಫಾ ಗಡಿದಾಟನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಅಲ್ಲದೆ ಎಲ್ಲಾ ಸಂಚಾರವನ್ನು ಕೂಡ ನಿರ್ಭಂಧಿಸಿತ್ತು. ಕಳೆದೆರಡು ದಿನಗಳಿಂದಲೂ ಇಲ್ಲಿಂದ ಪಲಾಯನ ಮಾಡಿ ಎಂದು ಗಾಜಾದ ಮಂದಿಯೊಂದಿಗೆ ಇಸ್ರೇಲ್ ಸೇನೆ ವಿನಂತಿಸುತ್ತಿದೆ.
ಟೆಕ್ಸ್ಟ್ ಮೆಸೇಜ್ ಫೋನ್ ಕಾಲ್ಗಳು ಮತ್ತು ಕರಪತ್ರಗಳ ಮೂಲಕ ಜನರಿಗೆ ಎಚ್ಚರಿಕೆಯನ್ನು ನೀಡುತ್ತಾ ಇದೆ. ರಫಾದ ಆಸ್ಪತ್ರೆಯ ವೈದ್ಯರು ಮತ್ತು ರೋಗಿಗಳು ಸುರಕ್ಷಿತ ಜಾಗದ ಹುಡುಕಾಟದಲ್ಲಿದ್ದಾರೆ ಗಡಿಯನ್ನು ಮುಚ್ಚಿರುವುದರಿಂದ ಮಾನವೀಯ ನೆರವುಗಳು ಕೂಡ ಈಗ ಸ್ಥಗಿತಗೊಂಡಿವೆ. ಆಹಾರ ಮತ್ತು ನೀರಿನ ಅಭಾವದಲ್ಲಿ ಜನರು ಅಕ್ಷರಶ ಒದ್ದಾಡುತ್ತಿದ್ದಾರೆ. 15 ಲಕ್ಷಕ್ಕಿಂತಲೂ ಅಧಿಕ ಫೆಲಿಸ್ತೀನಿಯರು ಪಶ್ಚಿಮ ರಫಾ ದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth