ಅನನ್ಯಾ ಭಟ್ ಫೋಟೋ ರಿವೀಲ್: “ಈಗ ವಾಪಸ್ ತಂದು ಕೊಡ್ತೀರಾ?”

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಮಿಸ್ಸಿಂಗ್ ಆಗಿದ್ದಾರೆನ್ನಲಾಗಿರುವ ಅನನ್ಯಾ ಭಟ್ ನ ಅಸ್ತಿತ್ವದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಕೆಲವೊಂದು ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಇದೀಗ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ತಮ್ಮ ಮಗಳ ಫೋಟೋ ಬಿಡುಗಡೆ ಮಾಡಿದ್ದಾರೆ.
ಅನನ್ಯಾ ಭಟ್ ಎಂಬಾಕೆಯೇ ಇಲ್ಲ ಎಂಬ ವಾದವನ್ನು ಕೆಲವರು ಮಾಡಿದ್ದರು. ಪೇಪರ್ ಕಟ್ಟಿಂಗ್ ವೊಂದನ್ನು ತೋರಿಸಿ ಸುಜಾತಾ ಭಟ್ ಬಗ್ಗೆ ಕಟ್ಟುಕತೆಯೊಂದು ವ್ಯಾಪಕವಾಗಿ ವೈರಲ್ ಆಗಿತ್ತು. ಇವೆಲ್ಲದಕ್ಕೂ ಸುಜಾತಾ ಭಟ್ ತಮ್ಮ ಮಗಳು ಅನನ್ಯಾ ಭಟ್ ಳ ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.
ತಮ್ಮ ವಕೀಲರ ಸಮ್ಮುಖದಲ್ಲಿ ಸುಜಾತಾ ಭಟ್ ಫೋಟೋ ಬಿಡುಗಡೆಗೊಳಿಸಿದರು. ನಾನು ನನ್ನ ಮಗಳ ಫೋಟೋ ತೋರಿಸಿದ್ರೆ, ನನ್ನ ಮಗಳನ್ನು ವಾಪಸ್ ಕೊಡ್ತೀರಾ ಎಂದು ಸುಜಾತಾ ಭಟ್ ಇದೇ ವೇಳೆ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD