8:45 AM Thursday 11 - December 2025

ಏರ್ಪೋರ್ಟ್ ನಿಂದ ಅನಾಥ ಶವದಂತೆ ಕೊರೊನಾ ಲಸಿಕೆ ಸಾಗಾಟ | ರಾಜ್ಯ ಸರ್ಕಾರದ ಬೇಜವಾಬ್ದಾರಿ

12/01/2021

ಬೆಂಗಳೂರು:  ಪುಣೆಯ ಸೇರಮ್ ಇನ್ ಟಿಟ್ಯೂಟ್ ನಿಂದ ಕೊವಿಶೀಲ್ಡ್ ಲಸಿಕೆ ಹೊತ್ತ ವಿಶೇಷ ವಿಮಾನ ಸ್ಪೈಸ್ ಜೆಟ್ ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಗಿದೆ. ಆದರೆ ಅಲ್ಲಿಂದ  ವ್ಯಾಕ್ಸಿನ್ ಸೆಂಟರ್ ಗೆ ಬೇಜವಾಬ್ದಾಯಿಂದ ಸಾಗಿಸಲಾಗಿರುವ ಘಟನೆ ವರದಿಯಾಗಿದೆ.

ವಿವಿಧ ರಾಜ್ಯಗಳಲ್ಲಿ ಕೊವಿಡ್ ಲಸಿಕೆಯನ್ನು ಸಂಬಂಧ ಪಟ್ಟ ಸಚಿವರು ಸ್ವಾಗತಿಸಿದರೆ, ಕರ್ನಾಟಕದಲ್ಲಿ ಹೀಗೆ ನಡೆದಿಲ್ಲ. ಸಚಿವ ಸಂಪುಟದ ಜಾತ್ರೆಯಲ್ಲಿ ಬ್ಯುಸಿಯಾಗಿರುವ ಸರ್ಕಾರ ಕೊವಿಡ್ ಲಸಿಕೆಯನ್ನು ಅನಾಥ ಶವದಂತೆ ವ್ಯಾಕ್ಸಿನ್ ಸೆಂಟರ್ ಗಳಿಗೆ ಸಾಗಿಸಿದೆ.

ಕೊವಿಡ್ ಲಸಿಕೆ ಸಾಗಿಸಲಾಗಿರುವ ವಾಹನಗಳಿಗೆ ಸರ್ಕಾರ ಕನಿಷ್ಠ ಭದ್ರತೆಯನ್ನೂ ನೀಡಲಾಗಿಲ್ಲ ಎಂದು ವರದಿಗಳಿಂದ ತಿಳಿದು ಬಂದಿದೆ.  7 ಲಕ್ಷ 94 ಸಾವಿರದ 500 ಡೋಸ್ ವ್ಯಾಕ್ಸಿನ್ ಗಳನ್ನು 54 ಬಾಕ್ಸ್ ಗಳಲ್ಲಿ ತರಲಾಗಿದೆ. ಇದು 1,728 ಕೆ.ಜಿ. ತೂಕವಿದೆ. ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ನೇತೃತ್ವದಲ್ಲಿ  ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಸ್ಟೋರ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ರಾಜ್ಯದ ಯಾವುದೇ ಸಚಿವರು ಕೊರೊನಾ ಲಸಿಕೆಯನ್ನು ಸ್ವಾಗತಿಸದೇ, ಅದೊಂದು ನಿರುಯುಕ್ತ ವಸ್ತು ಎಂಬಂತೆ ನಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನೆರೆಯ ಅಹ್ಮದಾಬಾದ್ ನಲ್ಲಿ ಕೊರೊನಾ ಲಸಿಕೆಯನ್ನು ಏರ್ಪೋರ್ಟ್ ನಿಂದ ಸರ್ಕಾರವು ಬಹಳ ಗೌರವಯುವತವಾಗಿ ಸಾಗಿಸಿತ್ತು. ಅಲ್ಲಿನ ಆರೋಗ್ಯ ಸಚಿವರು ಲಸಿಕೆ ಹೊತ್ತ ವಾಹನಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ವ್ಯಾಕ್ಸಿನ್ ಸೆಂಟರ್ ಗೆ ಕಳುಹಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಲಸಿಕೆ ಹೊತ್ತ ವಾಹನಕ್ಕೆ ಯಾವುದೇ ಮಹತ್ವ ನೀಡಲಾಗಿಲ್ಲ. ವಾಹನವು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು¸ಬೇಕಾ ಬಿಟ್ಟಿಯಾಗಿ ಸಂಚರಿಸುತ್ತಿರುವುದು ಕಂಡು ಬಂದಿದೆ.

 

ಇತ್ತೀಚಿನ ಸುದ್ದಿ

Exit mobile version