10:56 PM Thursday 29 - January 2026

ಪೂನಂ ಪಾಂಡೆ ಬಗ್ಗೆ ಹರಿದಾಡಿತು ಮತ್ತೊಂದು ಸುದ್ದಿ: ಇದಾದ್ರೂ ಸತ್ಯನಾ?

punampade
08/02/2024

ನವದೆಹಲಿ: ಇತ್ತೀಚೆಗೆ ತಾನು ಗರ್ಭ ಕಂಠ ಕ್ಯಾನ್ಸರ್ ನಿಂದ ಸಾವನ್ನಪ್ಪಿರೋದಾಗಿ ಸುಳ್ಳು ಸುದ್ದಿ ಹಬ್ಬಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಪೂನಂ ಪಾಂಡೆ ಅವರ ಬಗ್ಗೆ ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಪೂನಂ ಪಾಂಡೆ ಅವರನ್ನು ಗರ್ಭ ಕಂಠ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ರಾಯಭಾರಿಯನ್ನಾಗಿ ನೇಮಕ ಮಾಡುತ್ತಿದೆ, ಪೂನಂ ಪಾಂಡೆ ತಂಡ ಕೇಂದ್ರ ಸರ್ಕಾರದ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದೆ.

ಆದ್ರೆ ಈ ವೈರಲ್ ಸುದ್ದಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ಉದ್ದೇಶವಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದೆ.

ಪೂನಂ ಪಾಂಡೆ, ಗರ್ಭಕಂಠ ಕ್ಯಾನ್ಸರ್ ನಿಂದ ಸಾವನ್ನಪ್ಪಿರೋದಾಗಿ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಡಲಾಗಿತ್ತು. ಸಾಕಷ್ಟು ಜನ ಗಣ್ಯರು ಈ ಬಗೆಗಿನ ಸುದ್ದಿಯನ್ನು ಕೇಳಿ, ಶ್ರದ್ಧಾಂಜಲಿ ಅರ್ಪಿಸಿದ್ದರು. ಆದ್ರೆ ಇದು ಸುಳ್ಳು, ಪ್ರಚಾರಕ್ಕಾಗಿ ಈ ರೀತಿ ಸುಳ್ಳು ಸುದ್ದಿ ಹರಡಲಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಸುಳ್ಳು ಸುದ್ದಿ ಹರಡಿದ ಮರುದಿನ ಪೂನಂ ತಾನು ಬದುಕಿದ್ದೇನೆ. ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ವದಂತಿ ಹಬ್ಬಿಸಿದಾಗಿ ಸ್ಪಷ್ಟನೆ ನೀಡಿದ್ದರು.

ಇತ್ತೀಚಿನ ಸುದ್ದಿ

Exit mobile version