11:18 AM Saturday 18 - October 2025

ಮೋದಿ ಹುಟ್ಟುವಾಗಲೇ ಓಬಿಸಿ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ: ರಾಹುಲ್ ಗಾಂಧಿ ಹೇಳಿಕೆ

08/02/2024

ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್‌ನಲ್ಲಿ ಚೆಂದದ ಭಾಷಣ ಮಾಡಿ ತಮ್ಮನ್ನು ತಾವು ಒಬಿಸಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಹುಟ್ಟುವಾಗಲೇ ಒಬಿಸಿ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ದಿನಕ್ಕೆ ಹಲವಾರು ಬಾರಿ ಬಟ್ಟೆ ಬದಲಿಸಿ, ನಾನು ಒಬಿಸಿ ಎಂದು ಸುಳ್ಳು ಹೇಳುತ್ತೀರಿ ಎಂದು ರಾಹುಲ್ ಜರೆದಿದ್ದಾರೆ.
ಜಾತಿಗಣತಿಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಸಂಸತ್‌ನ ಬಜೆಟ್ ಅಧಿವೇಶನದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕೆಲವರು ಒಬಿಸಿ ಸಮುದಾಯದವರು ಉನ್ನತ ಅಧಿಕಾರದಲ್ಲಿ ಇಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಒಬಿಸಿಗೆ ಸೇರಿರುವ ನಾನು ಈ ದೇಶದ ಪ್ರಧಾನಿಯಾಗಿರುವುದು ಕಾಣಿಸುತ್ತಿಲ್ಲವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.
ಈ ಹೇಳಿಕೆಗೆ ಒಡಿಶಾದ ಜಾರಸ್‌ಗುಡದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೂರನೇ ಮತ್ತು ಮುಕ್ತಾಯದ ದಿನದಂದು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮೋದಿ ಜನರಲ್ ಕ್ಯಾಟಗರಿಗೆ ಸೇರಿದ ಕುಟುಂಬದಲ್ಲಿ ಜನಿಸಿದ್ದರು. 2000ರಲ್ಲಿ ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ರ‍್ಕಾರದ ಅವಧಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಲ್ಪಟ್ಟ ತೇಲಿ ಜಾತಿಯ ಕುಟುಂಬದಲ್ಲಿ ಮೋದಿ ಜನಿಸಿದವರು. ಆದ್ದರಿಂದ ಮೋದಿ ಹುಟ್ಟಿನಿಂದ ಒಬಿಸಿ ಅಲ್ಲ” ಎಂದು ರಾಹುಲ್ ಗಾಂಧಿ ತಿಳಿಸಿದರು.
“ಪ್ರಧಾನಿ ಮೋದಿ ಒಬಿಸಿಗಳೊಂದಿಗೆ ಕೈಕುಲುಕುವುದಿಲ್ಲ. ರೈತರ ಕೈ ಕುಲುಕುವುದಿಲ್ಲ. ಬದಲಿಗೆ ಕೋಟ್ಯಾಧಿಪತಿ ಅದಾನಿಯವರನ್ನು ಅಪ್ಪಿಕೊಳ್ಳುತ್ತಾರೆ” ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
“ನಾನು ಜಾತಿ ಗಣತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದಾಗ ದೇಶದಲ್ಲಿ ಇರುವುದು ಶ್ರೀಮಂತ ಮತ್ತು ಬಡವ ಜಾತಿ ಮಾತ್ರ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಎರಡು ಜಾತಿಗಳಿದ್ದರೆ ನೀವು ಯಾರು? ನೀವು ಬಡವರಲ್ಲ. ಕೋಟಿ ಬೆಲೆಬಾಳುವ ಸೂಟ್ ಧರಿಸುತ್ತೀರಿ ಎಂದಿದ್ದಾರೆ ರಾಹುಲ್.

ಇತ್ತೀಚಿನ ಸುದ್ದಿ

Exit mobile version