10:38 AM Saturday 23 - August 2025

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸುತ್ತೆ ವಿಡಿಯೋ

crime news
04/01/2022

ಉತ್ತರಪ್ರದೇಶ:  ದಲಿತ ಅಪ್ರಾಪ್ತ ವಯಸ್ಸಿನ  ಬಾಲಕಿಯನ್ನು  ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಕಳ್ಳತನ ಮಾಡಿದ್ದನ್ನು ಒಪ್ಪಿಕೋ ಎಂದು  ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯ  ಕಂಡು ಜನರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರು ಕೋಲುಗಳಿಂದ ಬಾಲಕಿಯ ಪಾದದ ಅಡಿಗೆ ಥಳಿಸುತ್ತಿದ್ದಾರೆ. ಮಹಿಳೆಯರು ಸೇರಿದಂತೆ ಇತರರು ಸುತ್ತಲೂ ನಿಂತು ಕೊಂಡು ಹಲ್ಲೆಕೋರರನ್ನು ಪ್ರೋತ್ಸಾಹಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಬಾಲಕಿಯು ಥಳಿಸಬೇಡಿ ಎಂದು ಬೇಡಿಕೊಂಡ ವೇಳೆ ಆಕೆಯ ತಲೆ ಕೂದಲು ಹಿಡಿದು ಎಳೆದಾಡುತ್ತ, ಹೆಣ್ಣು ಮಗು ಎಂದೂ ನೋಡದೇ ಹೀನಾಯ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ಶೇರ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. ತಕ್ಷಣವೇ ಪಾಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ವ್ಯಾಪಕ ಒತ್ತಾಯ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೇರೊಬ್ಬನನ್ನು ನೋಡಿದಳು ಎಂದು ಹುಡುಗಿಯನ್ನು ಕೊಂದ ಪಾಪಿ!

ಪ್ರೀತಿಸಿ ವಂಚನೆ: ಕನಕಗಿರಿ ಶಾಸಕರ ವಿರುದ್ಧ ಗಂಭೀರ ಆರೋಪ!

ರೈಲಿನಲ್ಲಿ ಪ್ರಯಾಣಿಕನಿಗೆ ಬೂಟುಗಾಲಿನಿಂದ ಒದ್ದ ಕೇರಳ ಪೊಲೀಸ್!

ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡೆಯ ಮೇಲೆ ಗುಂಡಿನ ದಾಳಿ

ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ

 

ಇತ್ತೀಚಿನ ಸುದ್ದಿ

Exit mobile version