ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ವತ್ಸಲಾ ಇನ್ನಿಲ್ಲ!

ಭೋಪಾಲ್(Mahanayaka): ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ವತ್ಸಲಾ(Vatsala) ತನ್ನ 100ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಕಾಲುಗಳಿಗೆ ಆಗಿದ್ದ ಗಂಭೀರ ಗಾಯದಿಂದ ವತ್ಸಲಾ ಕೊನೆಯುಸಿರೆಳೆದಿದೆ.
ಮಧ್ಯಪ್ರದೇಶ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿದ್ದ ವತ್ಸಲಾ, ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಚರಂಡಿ ಬಳಿ ಮುಂಬದಿ ಕಾಲುಗಳಿಗೆ ಗಾಯವಾಗಿ ಕುಳಿತುಕೊಂಡಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಆದರೂ ಮಧ್ಯಾಹ್ನದ ವೇಳೆಗೆ ಆನೆ ಮೃತಪಟ್ಟಿದೆ.
ವತ್ಸಲಾ ಆನೆಯ ಅಂತ್ಯಕ್ರಿಯೆಯನ್ನು ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ಮಂಗಳವಾರ ನೆರವೇರಿಸಿದ್ದಾರೆ.
ಈ ಆನೆಯನ್ನು ಕೇರಳದಿಂದ ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಕರೆತರಲಾಗಿತ್ತು. ಅನೇಕ ವರ್ಷಗಳಿಂದ ವತ್ಸಲಾ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು. ಮೀಸಲು ಪ್ರದೇಶದಲ್ಲಿರುವ ಆನೆಗಳ ಗುಂಪಿಗೆ ವತ್ಸಲಾ ನಾಯಕಿಯಾಗಿದ್ದಳು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD