ಜಾತಿ ಗಣತಿ ಮೂಲಕ ಮುಸ್ಲಿಮರ ಸಬಲೀಕರಣಕ್ಕೆ ಅಸ್ಸಾಂ ಮುಖ್ಯಮಂತ್ರಿ ಕರೆ

ಹಿಂದೂಗಳ ಜಾತಿ ಜನಗಣತಿಯ ಬಗ್ಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟದ ಗಮನವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಶ್ನಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೂ ಇದೇ ರೀತಿಯ ಜನಗಣತಿಯನ್ನು ನಡೆಸಬೇಕು ಎಂದು ಪ್ರಸ್ತಾಪಿಸಿದ್ದಾರೆ.
‘ಅಜೆಂಡಾ ಆಜ್ ತಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಶರ್ಮಾ, ಮುಸ್ಲಿಮರ ಸಬಲೀಕರಣಕ್ಕಾಗಿ ಜಾತಿ ಗಣತಿ ನಡೆಸುವ ಮಹತ್ವವನ್ನು ಒತ್ತಿ ಹೇಳಿದರು. ಜಾತಿ ಚರ್ಚೆಗಳ ಸಮಯದಲ್ಲಿ ಪ್ರತಿಪಕ್ಷಗಳು ಹಿಂದೂಗಳತ್ತ ಬೆರಳು ತೋರಿಸುತ್ತಿದ್ರೆ ದೇಶಕ್ಕೆ ನಿಜವಾಗಿಯೂ ಮುಸ್ಲಿಮರ ಸಮಗ್ರ ಜನಗಣತಿಯ ಅಗತ್ಯವಿದೆ ಎಂದು ಅವರು ಹೇಳಿದರು.
“ಹಿಂದೂಗಳು ನಮ್ಮ ಸಹೋದರರು. ಆದರೆ ಮುಸ್ಲಿಮರು ಹಿರಿಯ ಸಹೋದರರು. ಅವರು ಬಲಶಾಲಿಯಾಗಿರುವುದು ಬಹಳ ಮುಖ್ಯ” ಎಂದು ಹೇಳಿದರು. ಪ್ರತಿಪಕ್ಷಗಳನ್ನು ಟೀಕಿಸಿದ ಶರ್ಮಾ, “ಹಿಂದೂಗಳು ಈಗ ಜಾಗೃತರಾಗಿದ್ದಾರೆ, ವಿಭಜನೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ” ಎಂದು ದೃಢಪಡಿಸಿದರು.
“ನಾವು ಒಂದೇ. ನಮಗೆ ಇಬ್ಬರು ಸಹೋದರರು ಇದ್ದಾರೆ.
ಹಿಂದೂ ಮತ್ತು ಮುಸ್ಲಿಂ” ಎಂದು ಶರ್ಮಾ ಏಕತೆಯನ್ನು ಒತ್ತಿ ಹೇಳಿದರು. ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶರ್ಮಾ, ಕಾಂಗ್ರೆಸ್ ನಾಯಕನ ಕಾರ್ಯತಂತ್ರವು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಿನ್ನಡೆಯನ್ನುಂಟು ಮಾಡಿದೆ ಎಂದು ಟೀಕಿಸಿದರು. ಒಬಿಸಿ ಜನಗಣತಿಯ ಬಗ್ಗೆ ಚರ್ಚೆಯ ಸಮಯವನ್ನು ಅವರು ಪ್ರಶ್ನಿಸಿದರು. ಈ ವಿಷಯಗಳು ಚುನಾವಣೆಯ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ಸಲಹೆ ನೀಡಿದರು.