1,200ಕ್ಕೂ ಹೆಚ್ಚು ಮದರಸಾಗಳನ್ನು ‘ಮಿಡಲ್ ಇಂಗ್ಲಿಷ್ ಶಾಲೆ’ಗಳೆಂದು ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ..!

15/12/2023

ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ತನ್ನ ರಾಜ್ಯದ 1,281 ಮದರಸಾದ ಹೆಸರುಗಳನ್ನು ‘ಮಿಡಲ್‌ ಇಂಗ್ಲಿಷ್‌ ಸ್ಕೂಲ್‌’ ಎಂದು ಮರುನಾಮಕರಣ ಮಾಡಲಾಗಿದೆ.

ಅಸ್ಸಾಂನ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಈ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಅವರು ಸ್ಪಷ್ಟನೆ ನೀಡಿದ್ದಾರೆ.

“ಸೆಬಾ (ಸ್ಕೂಲ್ ಎಜುಕೇಶನ್ ಬೋರ್ಡ್ ಆಫ್ ಅಸ್ಸಾಂ) ಅಡಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಪ್ರಾಂತೀಯ ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಿದ ಪರಿಣಾಮವಾಗಿ, SEBA ಇಂದು ಅಧಿಸೂಚನೆಯ ಮೂಲಕ 1,281 ಮದರಸಾಗಳ ಹೆಸರನ್ನು ನಿಡಲ್‌ ಇಂಗ್ಲಿಷ್‌ ಶಾಲೆಗಳಾಗಿ ಬದಲಾಯಿಸಲಾಗಿದೆ” ಎಂದು ಪೆಗು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹಿಂದೆ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಉದ್ದೇಶವನ್ನು ವ್ಯಕ್ತಪಡಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಅಸ್ಸಾಂ ಸರ್ಕಾರವು ಕಳೆದ ವರ್ಷ ಎಲ್ಲಾ ಸರ್ಕಾರಿ ಮದ್ರಸಾಗಳನ್ನು ನಿಲ್ಲಿಸಿ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲು ನಿರ್ಧರಿಸಿತ್ತು, ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಮದರಸಾಗಳನ್ನು ನಡೆಸಲು 500 ಕೋಟಿ ಖರ್ಚು ಮಾಡಿದೆ ಎಂದು ಅಸ್ಸಾಂ ಸರ್ಕಾರ ಈ ಹಿಂದೆ ಹೇಳಿತ್ತು.

ಇತ್ತೀಚಿನ ಸುದ್ದಿ

Exit mobile version