ಕಳ್ಳಸಾಗಣೆ ಮಾಡುತ್ತಿದ್ದ ಆರು ಕಪ್ಪು ಪಾಮ್ ಕುಕಾಟೂ ಪಕ್ಷಿಗಳ ರಕ್ಷಣೆ

21/08/2023
ಕಳ್ಳಸಾಗಣೆ ಮಾಡುತ್ತಿದ್ದ ಆರು ಕಪ್ಪು ಪಾಮ್ ಕುಕಾಟೂ ಪಕ್ಷಿಗಳನ್ನು ರಕ್ಷಿಸಿದ ಘಟನೆಯು ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಪಕ್ಷಿಗಳು ಆಸ್ಟ್ರೇಲಿಯಾ, ಪಪುವಾಗಿನಿಯಾ ಮತ್ತು ಇಂಡೋನೇಷ್ಯಾದಿಂದ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕ್ಯಾಚಾರ್ ಎಸ್ಎಸ್ ಪಿ ಸುಬ್ರತಾ ಸೇನ್ ಮಾಹಿತಿ ನೀಡಿದ್ದು, ಧೋಲಾಖಲ್ ಬಾರ್ಡರ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಪಾಮ್ ಕುಕಾಟೂ ಪಕ್ಷಿಗಳ ಕಳ್ಳಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಕಳ್ಳಸಾಗಣೆದಾರರು ಪಕ್ಷಿಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಪ್ಪು ಪಾಮ್ ಕುಕಾಟೂ ಪಕ್ಷಿಗಳು, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿಯಾ, ಇಂಡೋನೇಷ್ಯಾದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಕ್ಷಿಗಳನ್ನು ಅಸ್ಸಾಂ ರಾಜ್ಯ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಮಾರುಕಟ್ಟೆಯಲ್ಲಿ ಈ ಪಕ್ಷಿಗಳ ಮೌಲ್ಯ ಸುಮಾರು 18-20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.