5:01 PM Tuesday 10 - November 2026

ಆತ್ಮಹತ್ಯೆಯ ಕೊನೆಯ ಕ್ಷಣದಲ್ಲಿ ಯುವತಿಯನ್ನು ರಕ್ಷಿಸಿದ ಪೊಲೀಸ್ | ವಿಡಿಯೋ ವೈರಲ್

faridabad
25/07/2021

ನವದೆಹಲಿ: ಯುವತಿಯೋರ್ವಳು ಆತ್ಮಹತ್ಯೆ ನಡೆಸಲು ಮೆಟ್ರೋ ಸ್ಟೇಷನ್  ಸೆಕ್ಟರ್ 28ರ ಗೋಡೆಯ ಮೇಲೆ ಹತ್ತಿದ್ದು, ಈ ವೇಳೆ ಪೊಲೀಸ್ ಕಾನ್ಸ್ ಟೇಬಲ್ ವೋರ್ವರು ಯುವತಿಗೆ ತಿಳಿಯದ ಹಾಗೆ ಏಕಾಏಕಿ ಗೋಡೆಯ ಬದಿಯಿಂದ ಹೋಗಿ ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೆಹಲಿಗೆ ಸಮೀಪದ ಫರಿದಾಬಾದ್ ನಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ. ಯುವತಿಯೋರ್ವಳು ಸೆಕ್ಟರ್ 28 ಗೋಡೆಯ ಮೇಲೆ ಕುಳಿತು ಆತ್ಮಹತ್ಯೆ ನಡೆಸಲು ಮುಂದಾಗಿದ್ದಾಳೆ. ಈ ವೇಳೆ ಆಕೆಯನ್ನು ಹಲವರು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ಗೋಡೆಯ ಮೇಲೆ ಕುಳಿತು ಕೆಳಗೆ ಹಾರಲು ಯುವತಿ ಧೈರ್ಯ ತಂದುಕೊಳ್ಳುತ್ತಿದ್ದಳು. ಈ ವೇಳೆ ಕಾನ್ ಸ್ಟೆಬಲ್ ಸರ್ಫ್ ರಾಜ್ ಅವರು ಮೆಲ್ಲಗೆ ಯುವತಿಯ ಬಳಿಗೆ ನಡೆದುಕೊಂಡು ಹೋಗಿದ್ದು, ಯುವತಿಗೆ ತಿಳಿಯುವ ಮೊದಲೇ ಆಕೆಯನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಇನ್ನೊಬ್ಬರು ಸಿಬ್ಬಂದಿ ಅವರಿಗೆ ನೆರವಾಗಿದ್ದಾರೆ.

ಸರ್ಫ್ ರಾಜ್ ಅವರು ಸ್ವಲ್ಪ ತಡ ಮಾಡುತ್ತಿದ್ದರೂ ಯುವತಿ ಕೆಳಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಳು. ಆಕೆ ಹಾರಲು ಸಿದ್ಧವಾಗುತ್ತಿದ್ದಂತೆಯೇ ಸರ್ಫ್ ರಾಜ್ ಅವರು ತಕ್ಷಣವೇ ಆಕೆಯನ್ನು ಹಿಡಿದುಕೊಂಡಿದ್ದಾರೆ. ಆಕೆ ಈ ವೇಳೆ ಒದ್ದಾಡಿದ್ದಾಳೆ. ಈ ವೇಳೆ ಸ್ವತಃ ರಕ್ಷಿಸಲು ಹೋದವರೇ ಅಪಾಯಕ್ಕೀಡಾಗುವ ಸಾಧ್ಯತೆ ಇತ್ತು. ತಕ್ಷಣವೇ ಸಮೀಪದಲ್ಲಿದ್ದವರು ಸಹಾಯ ಮಾಡುವ ಮೂಲಕ ಆಕೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್

ಸಂಜೆಯ ಸಂದೇಶ ಬರಲಿಲ್ಲ! | ಆಟ ಇನ್ನೂ ಮುಗಿದಿಲ್ಲ, ನಾಳೆಗೆ ಶಿಫ್ಟ್ ಆಗುತ್ತಾ ಸಿಎಂ ಬದಲಾವಣೆ ಹೈಡ್ರಾಮಾ?

ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ

ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ

ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!

 

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version