12:13 AM Thursday 21 - August 2025

ಕೊರೊನಾಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ!

mysore
09/05/2021

ಮೈಸೂರು: ಕೊವಿಡ್ ಸೋಂಕಿಗೆ ಹೆದರಿ 65 ವರ್ಷ ವಯಸ್ಸಿನ ಕೊರೊನಾ ಸೋಂಕಿತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಸಿದ್ಧಾರ್ಥ್ ಲೇಔಟ್ ನಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಖಿನ ಬನ್ನೂರು ಹೋಬಳಿಯ ಗೊರವನಹಳ್ಳಿ ನಿವಾಸಿಯಾಗಿದ್ದ ಶಿವನಂಜೇಗೌಡ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ.  ನಾಲ್ಕು ದಿನಗಳ ಹಿಂದೆಯಷ್ಟೇ ಇವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಹೋಮ್ ಐಸೋಲೇಷನ್ ಗೆ ಒಳಪಡಿಸಲಾಗಿತ್ತು.

ಕೊರೊನಾದಿಂದ ಸಾಯುವ ಭಯದಿಂದ ಅವರು ಸಾಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.  ಇಲ್ಲಿನ ವರುಣಾ ಕೆರೆಗೆ ಹಾರಿ ಶಿವನಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ ಐ ಲಕ್ಷ್ಮೀ ಆರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version