ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಇಬ್ಬರು ಜವಾನರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯ ನಂತರ ಧರ್ಮಸಾಲ್ನ ಬಾಜಿಮಾಲ್ ಪ್ರದೇಶದಲ್ಲಿದ್ದ ಇಬ್ಬರು ಭಯೋತ್ಪಾದಕರನ್ನು ಕೊಲ್ಲ...
ಉತ್ತರಖಾಂಡ್ ನ ಉತ್ತರಕಾಶಿ ಜಿಲ್ಲೆಯಲ್ಲಿನ ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಇಲ್ಲಿ ನವೆಂಬರ್ 12 ರಿಂದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ಕಾಪಾಡುವ ಮಾರ್ಗವನ್ನು ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳ ಮೂಲಕ 45 ...
ಗುಜರಾತ್ ನ ಹಳೆಯ ಮುಂದ್ರಾ ಬಂದರಿನಲ್ಲಿ ದೋಣಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕ್ಕಿ ತುಂಬಿದ ದೋಣಿಯಲ್ಲಿ ಲೋಡಿಂಗ್ ಪ್ರಕ್ರಿಯೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿಯನ್ನು ನಂದಿಸಲು ಅದಾನಿ ಗ್ರೂಪ್ ನ ಎರಡು ಮತ್ತು ಮತ್ತೊಂದು ಖಾಸಗಿ ಕಂಪನಿಯ ಒಂದು...
ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರು ಈ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಶಾಶ್ವತ ನಂಬಿಕೆಯಾಗಿದೆ ಎಂದು ಹೇಳಿದ್ದಾರೆ. "ಅವರಿಗೆ ಸನಾತನ ಎಂದರೇನು ಎಂದು ತಿಳಿದಿಲ್ಲ. ಅದ...
ಫೆಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುಎನ್ ಏಜೆನ್ಸಿಗೆ 2.5 ಮಿಲಿಯನ್ ಡಾಲರ್ ದೇಣಿಗೆ ನೀಡಿದೆ. ಯುಎನ್ಆರ್ ಡಬ್ಲ್ಯೂಎ ಕಷ್ಟದ ಸಮಯದಲ್ಲಿ ಉದಾರ ಕೊಡುಗೆಯನ್ನು ಸ್ವಾಗತಿಸಲು ಪ್ರೇರೇಪಿಸಿದೆ. 1950ರಿಂದ ಕಾರ್ಯಾಚರಿಸುತ್ತಿರುವ ಫೆಲೆಸ್ತೀನ್ ನಿರಾಶ್ರಿತರ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ) ನೋಂದಾಯಿತ...
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಗ್ರಾಮವೊಂದರಲ್ಲಿ ನ್ಯುಮೋನಿಯಾಕ್ಕೆ ಚಿಕಿತ್ಸೆಯಾಗಿ ಒಂದೂವರೆ ತಿಂಗಳ ಮಗುವಿಗೆ 40 ಕ್ಕೂ ಹೆಚ್ಚು ಬಾರಿ ಬಿಸಿ ಕಬ್ಬಿಣದ ರಾಡ್ ನಿಂದ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ 40 ಕ್ಕೂ ಹೆಚ್ಚು ಗಾಯದ ಗುರುತುಗಳು ಕಂಡುಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ...
ಬಿಜೆಪಿ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಂದ್ಯ ಅಹಮದಾಬಾದ್ ನ ಬದಲು ಲಕ್ನೋದಲ್ಲಿ ನಡೆದಿದ್ದರೆ ಟೀಮ್ ಇಂಡಿಯಾ ಹೈ ವೋಲ್ಟೇಜ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತ...
ವಿಶ್ವ ಶೌಚಾಲಯ ದಿನದ ಅಂಗವಾಗಿ ಅಮೆರಿಕಾದ ಬಿಲಿಯಾಧಿಪತಿ ಬಿಲ್ ಗೇಟ್ಸ್ ಅವರು ಬ್ರಸ್ಸೆಲ್ಸ್ನ ಒಳಚರಂಡಿಯೊಂದಕ್ಕೆ ಇಳಿದ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತ ವೀಡಿಯೋ ಶೇರ್ ಮಾಡಿದ ಬಿಲ್ ಗೇಟ್ಸ್, ಒಳಚರಂಡಿಯನ್ನು ಪ್ರವೇಶಿಸಿ ಬ್ರಸ್ಸೆಲ್ಸ್ ನಗರದ ಒಳಚರಂಡಿ ವ್ಯವಸ್ಥೆಯ ಇತಿಹಾಸವನ್ನು ಅನ್ವೇಷಿಸಿರುವುದಾಗಿ ಹೇಳಿದ್...
ದಿಲ್ಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕೆರೊಬ್ಬರಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ. ಬೆಂಗಳೂರು ಮೂಲದ ವೈದ್ಯ ಸುಂದರ್ ಶಂಕರನ್ ಅವರ ತ್ವರಿತ ಮತ್...
ದೇಗುಲಗಳಲ್ಲಿ ಇತರೆ ಧರ್ಮದವರಿಗೆ ಉದ್ಯೋಗ ಮಾಡಲು ಅವಕಾಶವಿಲ್ಲ. ಹಿಂದೂ ಧರ್ಮವನ್ನು ಪಾಲಿಸುವವರು ಮಾತ್ರ ದೇಗುಲಗಳಲ್ಲಿ ಉದ್ಯೋಗ ನಿರ್ವಹಿಸಲು ಅರ್ಹರು ಎಂದು ಆಂಧ್ರಪ್ರದೇಶ ಹೈಕೋರ್ಟ್ ಹೇಳಿದೆ. ತಮ್ಮನ್ನು ಶ್ರೀಶೈಲಂ ದೇವಸ್ಥಾನಂನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪಿ.ಸುದರ್ಶನ್ ಬಾಬು ಎಂಬುವವರು...