ಆರು ತಿಂಗಳ ಅವಧಿಯ ಉದ್ಯೋಗ ವೀಸಾವನ್ನು ಬಹರೈನ್ ಘೋಷಿಸಿದೆ. ಈಗಾಗಲೇ ಒಂದು ವರ್ಷ ಮತ್ತು ಎರಡು ವರ್ಷಗಳ ವೀಸಾ ಪರ್ಮಿಟ್ ಗಳು ಅಸ್ತಿತ್ವದಲ್ಲಿದ್ದು ಅದರ ಹೊರತಾಗಿ ಈ ಹೊಸ ವೀಸಾವನ್ನು ಪರಿಚಯಿಸಲಾಗಿದೆ. ಬಹರೈನ್ ನಲ್ಲಿ ವಾಸಿಸುತ್ತಿರುವ ವಿದೇಶಿಯರು ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ಹೊಸ ವಿಸಾಕ್ಕೆ ಯೋಗ್ಯರಾಗಿದ್ದಾರೆ...
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಯಹೂದಿಯರನ್ನು ತಂದು ಕೂರಿಸುವ ಭಾರೀ ದೊಡ್ಡ ಯೋಜನೆಗೆ ಇಸ್ರೇಲ್ ಮುಂದಾಗಿದೆ. ಈ ಕಾರಣಕ್ಕಾಗಿ ಪಶ್ಚಿಮ ದಂಡೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಮನೆಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಫೆಲಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಒಂದೇ ಪರಿಹಾರ ಎಂದು ವಾದಿಸುತ್ತಿರುವ ಇಸ್ರೇಲಿನ ಪೀಸ್ ನೌ ಏಜೆ...
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಯಾತ್ರಿಕರು ನಿನ್ನೆ ದಿಲ್ಲಿಯ ರೈಲು ನಿಲ್ದಾಣದಲ್ಲಾದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು .ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ ₹10 ಲಕ್ಷ ಪರಿಹಾರ ಘೋಷಿಸಿದೆ. ಮೃತರ ಮರಣೋತ್ತರ ಪರೀಕ್ಷೆಯನ್ನು ರಾತ್ರಿಯವರೆಗೂ ನಡೆಸಿ, ಶವಾಗಾರದಲ್ಲೇ ಮೃತರ ಕುಟುಂಬಗಳಿಗೆ 10 ಲಕ್ಷ ರೂ. ನಗದು ಪರಿಹಾ...
ಪತಿ ಪತ್ನಿಯರಾಗಿ 84 ವರ್ಷಗಳಿಂದ ಬದುಕುತ್ತಿರುವ ಬ್ರೆಜಿಲ್ ನ ಮನೋಯ ಮತ್ತು ಮರಿಯ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. 1940ರಲ್ಲಿ ಇವರಿಬ್ಬರೂ ಮದುವೆಯಾದರು. ಇವ್ರದ್ದು ಪ್ರೇಮ ವಿವಾಹವಾಗಿತ್ತು. ಆರಂಭದಲ್ಲಿ ಈ ಮರಿಯರ ಹೆತ್ತವರು ಮದುವೆಯ ಬಗ್ಗೆ ಅಸಮಾಧಾನ ಹೊಂದಿದ್ದರು. ಇವರಿಗೆ 13 ಮಕ್ಕಳು ಮತ್ತು 55 ಮೊಮ್ಮಕ್ಕಳಿದ್ದಾರೆ. ಹಾಗೆಯೇ ಈ ಮ...
ಬೋಟಲ್ಲಿ ತೆರಳುತ್ತಿದ್ದ ಯುವಕನನ್ನು ಭಾರೀ ಗಾತ್ರದ ತಿಮಿಂಗಿಲ ಒಂದು ಬೋಟ್ ಸಮೇತ ನುಂಗುವುದು ಮತ್ತು ಆ ಬಳಿಕ ಆತನನ್ನು ಮತ್ತು ಬೋಟನ್ನು ಉಗುಳುವ ವಿಡಿಯೋ ವೈರಲ್ ಆಗಿದೆ. ಚಿಲಿಯ ಪೆಟ್ಟಾಗೋನ್ ಪ್ರದೇಶದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಇನ್ನೊಂದು ಬೋಟ್ನಲ್ಲಿ ದ್ದ ಯುವಕನ ತಂದೆ ವಿಡಿಯೋ ಚಿತ್ರಿಸುತ್ತಿರುವುದರ ನಡುವೆ ಇವೆಲ್ಲವೂ ದಾಖಲಾಗಿದೆ...
ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ. ಹೆಚ್ಚುವರಿ ದಂಡವನ್ನೂ ವಿಧಿಸಲಾಗುತ್ತದೆ. *ಫಾಸ್ಟ್ಟ್ಯಾಗ್ನ...
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ಕೊಟ್ಟು ಅಧ್ಯಕ್ಷ ಟ್ರಂಪ್ ಅವರ ಜೊತೆ ಮಾತುಕತೆ ನಡೆಸಿದ ಬಳಿಕವೂ ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ ಕಾಲಿಗೆ ಸಂಕೋಲೆಯಿಂದ ಬಿಗಿದು ಕಳಿಸುವುದು ಮಾತ್ರ ನಿಂತಿಲ್ಲ. ಇದೀಗ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿರುವ ನೂರಕ್ಕಿಂತಲೂ ಅಧಿಕ ವಲಸಿಗರನ್ನು ಅಮೆರಿಕ ಇದೇ ರೀತಿಯಲ್ಲಿ ಕಳುಹಿಸಿಕೊಟ್ಟಿದೆ...
ಅಮೆರಿಕದ ಕೆಂಟುಕಿಯಲ್ಲಿ ಭಾರೀ ಮಳೆ ಮತ್ತು ನೀರಿನಿಂದ ಆವೃತವಾದ ರಸ್ತೆಗಳಿಂದ ಪ್ರವಾಹ ತುಂಬಿದ್ದರಿಂದ 9 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ದುರಂತದ ಬಗ್ಗೆ ಮಾತನಾಡಿದ ಕೆಂಟುಕಿ ಗವರ್ನರ್ ಆಂಡಿ ಬೆಶರ್, ಪ್ರವಾಹದಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು. ಈ ಮಧ್ಯೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಪ...
ಮಹಾ ಕುಂಭ ಮೇಳಕ್ಕಾಗಿ ಪ್ರಯಾಗ್ ರಾಜ್ ತಲುಪಲು ರೆಡಿಯಾಗಿದ್ದ ಭಕ್ತರ ಭಾರೀ ದಟ್ಟಣೆಯಿಂದಾಗಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಪ್ಲಾಟ್ ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಕಾಲ್ತುಳಿತ ಸಂಭವಿಸಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ...
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹಿಂದೂ ಸಮಾಜವನ್ನು ಒಗ್ಗೂಡಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ. ಹಿಂದೂ ಸಮಾಜ ದೇಶದ "ಜವಾಬ್ದಾರಿಯುತ" ಸಮುದಾಯ ಎಂದು ಕರೆದರು ಮತ್ತು ಏಕತೆಯನ್ನು ವೈವಿಧ್ಯತೆಯ ಸಾಕಾರರೂಪವಾಗಿ ನೋಡುತ್ತದೆ ಎಂದು ಹೇಳಿದ್ದಾರೆ. ಬರ್ಧಮಾನ್ ನ ಸಾಯ್ ಮೈದಾನದಲ್ಲಿ ನಡೆದ ಆರ್ ಎಸ್ಎಸ್ ಕಾರ್ಯಕ್ರಮವನ್ನುದ್ದ...