ಅಮೆರಿಕದಲ್ಲಿ ಪ್ರವಾಹ, ಭೀಕರ ಬಿರುಗಾಳಿ: 9 ಮಂದಿ ಬಲಿ - Mahanayaka

ಅಮೆರಿಕದಲ್ಲಿ ಪ್ರವಾಹ, ಭೀಕರ ಬಿರುಗಾಳಿ: 9 ಮಂದಿ ಬಲಿ

17/02/2025

ಅಮೆರಿಕದ ಕೆಂಟುಕಿಯಲ್ಲಿ ಭಾರೀ ಮಳೆ ಮತ್ತು ನೀರಿನಿಂದ ಆವೃತವಾದ ರಸ್ತೆಗಳಿಂದ ಪ್ರವಾಹ ತುಂಬಿದ್ದರಿಂದ 9 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.


Provided by

ದುರಂತದ ಬಗ್ಗೆ ಮಾತನಾಡಿದ ಕೆಂಟುಕಿ ಗವರ್ನರ್ ಆಂಡಿ ಬೆಶರ್, ಪ್ರವಾಹದಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು. ಈ ಮಧ್ಯೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಪತ್ತು ಘೋಷಣೆಗಾಗಿ ರಾಜ್ಯದ ವಿನಂತಿಯನ್ನು ಅನುಮೋದಿಸಿದರು ಮತ್ತು ರಾಜ್ಯದಾದ್ಯಂತ ಪರಿಹಾರ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಫೆಡರಲ್ ತುರ್ತು ನಿರ್ವಹಣಾ ಸಂಸ್ಥೆಗೆ ಅಧಿಕಾರ ನೀಡಿದ್ದಾರೆ.

ಹೆಚ್ಚಿನ ಸಾವುಗಳು ಕಾರುಗಳು ಪ್ರವಾಹದ ನೀರಿನಲ್ಲಿ ಸಿಲುಕಿದ್ದರಿಂದ ತಾಯಿ ಮತ್ತು 7 ವರ್ಷದ ಮಗು ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬೆಶರ್ ಹೇಳಿದ್ದಾರೆ. ಹೀಗಾಗಿ ಜನರು ರಸ್ತೆಗಳಿಂದ ದೂರವಿರಬೇಕೆಂದು ಅವರು ಒತ್ತಾಯಿಸಿದರು. “ಆದ್ದರಿಂದ ಜನರೇ, ಈಗಲೇ ರಸ್ತೆಗಳಿಂದ ದೂರವಿರಿ ಎಂದು ಅವರು ಹೇಳಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ