ಹಿಂದೂ ಏಕತೆಗೆ ಕರೆ ನೀಡಿದ ಆರ್ ಎಸ್ ಎಸ್ ಮುಖ್ಯಸ್ಥ: ಆರ್ ಎಸ್ ಎಸ್ ನಿಂದ ಹಿಂದೂ ಸಮಾಜವನ್ನು ಉಳಿಸುತ್ತದೆ ಎಂದ ಮೋಹನ್ ಭಾಗವತ್

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹಿಂದೂ ಸಮಾಜವನ್ನು ಒಗ್ಗೂಡಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ. ಹಿಂದೂ ಸಮಾಜ ದೇಶದ “ಜವಾಬ್ದಾರಿಯುತ” ಸಮುದಾಯ ಎಂದು ಕರೆದರು ಮತ್ತು ಏಕತೆಯನ್ನು ವೈವಿಧ್ಯತೆಯ ಸಾಕಾರರೂಪವಾಗಿ ನೋಡುತ್ತದೆ ಎಂದು ಹೇಳಿದ್ದಾರೆ.
ಬರ್ಧಮಾನ್ ನ ಸಾಯ್ ಮೈದಾನದಲ್ಲಿ ನಡೆದ ಆರ್ ಎಸ್ಎಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ನಾವು ಹಿಂದೂ ಸಮಾಜದ ಮೇಲೆ ಮಾತ್ರ ಏಕೆ ಗಮನ ಹರಿಸುತ್ತೇವೆ ಎಂದು ಜನರು ಆಗಾಗ್ಗೆ ಕೇಳುತ್ತಾರೆ. ಅದಕ್ಕೆ ನನ್ನ ಉತ್ತರವೆಂದರೆ ದೇಶದ ಜವಾಬ್ದಾರಿಯುತ ಸಮಾಜ ಹಿಂದೂ ಸಮಾಜ ಎಂದಿದ್ದಾರೆ.
ಸಂಘದ ಬಗ್ಗೆ ತಿಳಿದಿಲ್ಲದವರು ಅದಕ್ಕೆ ಏನು ಬೇಕು ಎಂದು ಆಗಾಗ್ಗೆ ಆಶ್ಚರ್ಯ ಪಡುತ್ತಾರೆ. ಅದಕ್ಕೆ ನಾನು ಉತ್ತರಿಸಬೇಕಾದರೆ, ಸಂಘವು ಹಿಂದೂ ಸಮಾಜವನ್ನು ಸಂಘಟಿಸಲು ಪ್ರಯತ್ನಿಸುತ್ತದೆ. ಯಾಕೆಂದರೆ ಅದು ದೇಶದ ಜವಾಬ್ದಾರಿಯುತ ಸಮಾಜವಾಗಿದೆ ಎಂದು ಭಾಗವತ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj